ರಾಷ್ಟ್ರೀಯ
ಮಾನನಷ್ಟ ಮೊಕದ್ದಮೆ ವಿಚಾರಣೆ ರದ್ದುಗೊಳಿಸುವಂತೆ ಕೋರಿದ್ದ ಕಂಗನಾ ಮನವಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಕಂಗನಾ ರಣಾವತ್ (file photo: PTI)
ಮುಂಬೈ: ಸಾಹಿತಿ ಜಾವೇದ್ ಅಖ್ತರ್ ದೂರಿನ ಮೇರೆಗೆ ನಟಿ ಕಂಗನಾ ರಣಾವತ್ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಸೆಪ್ಟೆಂಬರ್ 1 ರಂದು ಕಂಗನಾ ರಣಾವತ್ ಮನವಿಯ ಮೇಲೆ ನ್ಯಾಯಾಲಯ ಆದೇಶಗಳನ್ನು ಕಾಯ್ದಿರಿಸಿದೆ.
ಜುಲೈ 19, 2020 ರಂದು ರಿಪಬ್ಲಿಕ್ ಟಿವಿ ಆ್ಯಂಕರ್ ಅರ್ನಬ್ ಗೋಸ್ವಾಮಿ ಅವರ ಸಂದರ್ಶನದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಲ್ಲಿ ಅಖ್ತರ್ ಅವರ ಹೆಸರನ್ನು ಎಳೆ ತರುವ ಮೂಲಕ ರಣಾವತ್ ತನ್ನ ಖ್ಯಾತಿಯನ್ನು ಹಾಳು ಮಾಡಿದ್ದಾರೆ ಎಂದು ಅಖ್ತರ್ ಆರೋಪಿಸಿದ್ದಾರೆ.
ಸಿಆರ್ಪಿಸಿ ಸೆಕ್ಷನ್ 482 ರ ಅಡಿಯಲ್ಲಿ ರಣಾವತ್ ತನ್ನ ಮನವಿಯಲ್ಲಿ ಅಖ್ತರ್ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆಗೆ ನಿರ್ದೇಶಿಸಿರುವ ಮ್ಯಾಜಿಸ್ಟ್ರೇಟ್ ಆದೇಶ ಗಳನ್ನು ಸೆಕ್ಷನ್ 204 ರ ಅಡಿಯಲ್ಲಿ ಆಕೆಯ ವಿರುದ್ಧ ಆದೇಶ ಹೊರಡಿಸುವ ಪ್ರಕ್ರಿಯೆ ಮತ್ತು ಹಾಜರಾಗಲು ಸಮನ್ಸ್ ಅನ್ನು ರದ್ದುಪಡಿಸುವಂತೆ ರಣಾವತ್ ಕೋರಿದ್ದರು
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ












