ರಾಷ್ಟ್ರೀಯ
ತನಿಖೆಯಿಲ್ಲದೆ ನಾವು ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ
ಕರ್ನಾಲ್ ಘಟನೆಯಲ್ಲಿ ರೈತ ನಾಯಕರ ತಪ್ಪಿದ್ದರೆ ಅವರ ವಿರುದ್ಧವೂ ಕ್ರಮ: ಹರ್ಯಾಣ ಗೃಹ ಸಚಿವ

ಚಂಡೀಗಡ: ಆಗಸ್ಟ್ 28 ರಂದು ರೈತರ ಮೇಲೆ ಪೊಲೀಸರ ಲಾಠಿ ಚಾರ್ಜ್ ಹಾಗೂ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಅವರ 'ರೈತರ ತಲೆ ಒಡೆಯಬೇಕೆಂಬ' ಹೇಳಿಕೆ ಸೇರಿದಂತೆ ಕರ್ನಾಲ್ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಗುರುವಾರ ಹೇಳಿದರು.
" ಆಯುಷ್ ಸಿನ್ಹಾ ಮಾತ್ರವಲ್ಲ ನಾವು ಇಡೀ ಕರ್ನಾಲ್ ಘಟನೆಯನ್ನು ತನಿಖೆ ಮಾಡುತ್ತೇವೆ .... ತನಿಖೆಯಿಲ್ಲದೆ ನಾವು ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ. ರೈತ ನಾಯಕರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಾವು ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ’’ ಎಂದು ವಿಜ್ ಹೇಳಿದರು.
ಕಳೆದ ತಿಂಗಳು ನಡೆದ ಲಾಠಿ ಚಾರ್ಜ್ ಅನ್ನು ವಿರೋಧಿಸಿ ಹರ್ಯಾಣ ಸರಕಾರ ಹಾಗೂ ರೈತರ ನಡುವೆ ಹೊಯ್ದಾಟ ನಡೆಯುತ್ತಿರುವ ನಡುವೆ ವಿಜ್ ಅವರು ಹೇಳಿಕೆ ನೀಡಿದ್ದಾರೆ. ರೈತರ ಮೇಲಿನ ಲಾಠಿ ಚಾರ್ಜ್ ರೈತರೊಬ್ಬರ ಸಾವಿಗೆ ಕಾರಣವಾಯಿತು ಹಾಗೂ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ












