ಕ್ರೀಡೆ
ಐದನೇ ಟೆಸ್ಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆ
ಭಾರತ ಕ್ರಿಕೆಟ್ ತಂಡದ ಇನ್ನೊಬ್ಬ ಸಹಾಯಕ ಸಿಬ್ಬಂದಿಗೆ ಕೊರೋನ

photo:PTI
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಇಂಗ್ಲೆಂಡ್ ವಿರುದ್ಧ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೇಲೆ ಪರಿಣಾಮಬೀರಬಲ್ಲ ಬೆಳವಣಿಗೆಯೊಂದು ನಡೆದಿದೆ. ಮ್ಯಾಂಚೆಸ್ಟರ್ ನಲ್ಲಿ ಭಾರತದ ಇನ್ನೊಬ್ಬ ಸಹಾಯಕ ಸಿಬ್ಬಂದಿಗೆ ಕೊರೋನ ದೃಢಪಟ್ಟಿದೆ. ಐದನೇ ಟೆಸ್ಟ್ ಮುನ್ನಾದಿನವಾಗಿರುವ ಗುರುವಾರ ಭಾರತದ ಟೀಮ್ ಪ್ರಾಕ್ಟೀಸ್ ರದ್ದಾಗಿದೆ.
ಮುಂದಿನ ಸೂಚನೆಯ ತನಕ ಹೊಟೇಲ್ ಕೊಠಡಿಯಲ್ಲೇ ಇರುವಂತೆ ಭಾರತೀಯ ತಂಡದ ಸದಸ್ಯರಿಗೆ ತಿಳಿಸಲಾಗಿದೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ ಫೋ ತಿಳಿಸಿದೆ.
ಇಡೀ ಭಾರತೀಯ ತಂಡವು ಗುರುವಾರ ಬೆಳಗ್ಗೆ ಹೊಸ ಪರೀಕ್ಷೆಗೆ ಒಳಗಾಗಿದ್ದು ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ಆಟಗಾರರ ಗುಂಪಿನಲ್ಲಿ ಪಾಸಿಟಿವ್ ಟೆಸ್ಟ್ ಬಂದರೆ ಯುಎಇಯಲ್ಲಿ ಸೆಪ್ಟಂಬರ್ 19ರಂದು ಪುನರಾರಂಭವಾಗಲಿರುವ 2021ರ ಐಪಿಎಲ್ ಮೇಲೆ ಪರಿಣಾಮಬೀರಬಹುದು.
ನಾಲ್ಕನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಗೆ ಕೊರೋನ ದೃಢಪಟ್ಟಿತ್ತು. ಈ ಮೂವರನ್ನು ತಂಡದೊಂದಿಗೆ ಮ್ಯಾಂಚೆಸ್ಟರ್ ಗೆ ತೆರಳದಂತೆ ತಡೆಯಲಾಗಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ












