ರಾಷ್ಟ್ರೀಯ
ಖ್ಯಾತ ಮಹಿಳಾ ಹಕ್ಕು ಹೋರಾಟಗಾರ್ತಿ ಸೋನಾಲ್ ಶುಕ್ಲಾ ನಿಧನ
ವಾರ್ತಾ ಭಾರತಿ : 9 Sep, 2021

Photo Credit: Twitter/@tulibanerjee
ಮುಂಬೈ: ಖ್ಯಾತ ಮಹಿಳಾ ಹಕ್ಕು ಹೋರಾಟಗಾರ್ತಿ ಸೋನಾಲ್ ಶುಕ್ಲಾ ಹೃದಯಸ್ತಂಬನದಿಂದ ಗುರುವಾರ ಮುಂಬೈನಲ್ಲಿ ಮೃತಪಟ್ಟರು ಎಂದು ಅವರ ಸಹಪಾಠಿಗಳು ತಿಳಿಸಿದ್ದಾರೆ.
80ರ ವಯಸ್ಸಿನ ಶುಕ್ಲಾ ಅವರು ವಾಚಾ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಿ ಹಾಗೂ ಆಡಳಿತ ಟ್ರಸ್ಟಿ ಆಗಿದ್ದರು. ಕಳೆದ ನಾಲ್ಕು ದಶಕಗಳಿಂದ ಹದಿಹರೆಯದ ಹುಡುಗಿಯರು ಹಾಗೂ ಮಹಿಳೆಯರಿಗಾಗಿ ಕೆಲಸ ಮಾಡಿದ್ದರು.
ಸೋನಾಲ್ ಬೆನ್ ಎಂದೇ ಖ್ಯಾತರಾಗಿರುವ ಶುಕ್ಲಾ ಅವರು 1987ರಲ್ಲಿ ವಾಚಾವನ್ನು ಒಂದು ಗ್ರಂಥಾಲಯ ಹಾಗೂ ಮಹಿಳೆಯರ ಸಂಪ್ಮನೂಲ ಕೇಂದ್ರವಾಗಿ ಆರಂಭಿಸಿದ್ದರು. 3000ಕ್ಕೂ ಅಧಿಕ ಪುಸ್ತಕಗಳಿರುವ ಮಹಿಳೆಯರ ಏಕೈಕ ಬುಕ್ ಲೈಬ್ರರಿ ಇದಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)












