varthabharthi


ನಿಧನ

ಯು.ವಿ. ಭಟ್

ವಾರ್ತಾ ಭಾರತಿ : 11 Sep, 2021

ಉಪ್ಪಿನಂಗಡಿ : ಇಲ್ಲಿನ ಸಾಹುಕಾರ ಮನೆತನದ ಹಿರಿಯ ವ್ಯಕ್ತಿ, ಪ್ರೆಸ್ಟೋ ಆಹಾರ ಉದ್ಯಮದ ಸಂಸ್ಥಾಪಕ ಯು.ವಿ.ಭಟ್ (86) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಅತ್ತಾವರದಲ್ಲಿನ ಅವರ ಮನೆಯಲ್ಲಿ ಶುಕ್ರವಾರ ನಿಧನರಾದರು.

ಹುಟ್ಟೂರ ಹಾಗೂ ತಾನು ಕಲಿತ ಸರಕಾರಿ ಮಾದರಿ ಶಾಲೆಯನ್ನು ದತ್ತು ಸ್ವೀಕರಿಸಿ ಸುಮಾರು 80 ಲಕ್ಷ ರೂ. ವೆಚ್ಚದ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿಕೊಟ್ಟ ಇವರು, ಬಳಿಕದ ದಿನಗಳಲ್ಲಿ ಉಪ್ಪಿನಂಗಡಿಯ ವೀರಾಂಜನೇಯ ದೇವಾಲಯವನ್ನು ಶಿಲಾಮಯವಾಗಿ ಪುನರ್ ನಿರ್ಮಿಸಿದ್ದರು. ಹುಟ್ಟೂರ ಸ್ಮಶಾನವನ್ನು ಸುಸಜ್ಜಿತವಾಗಿ ಪುನರ್ ನಿರ್ಮಿಸಿದ ಇವರು, ಪರಿಸರದ ಹಲವಾರು ಶಾಲೆಗಳಿಗೆ ಧಾರ್ಮಿಕ ಕೇಂದ್ರಗಳಿಗೆ ಯಥೇಚ್ಚಾ ಧನ ಸಹಾಯ ನೀಡಿ ಸಹಕಾರ ನೀಡಿದ್ದರು.

ಮೃತ ದೇಹವನ್ನು ಉಪ್ಪಿನಂಗಡಿಯ ಅವರ ಮೂಲ ಮನೆಗೆ ತಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ  ಉಪ್ಪಿನಂಗಡಿಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಮೃತರು ಪತ್ನಿಯನ್ನು  ಅಗಲಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)