varthabharthi


ಕ್ರೀಡೆ

ಝಿಂಬಾಬ್ವೆ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ

ವಾರ್ತಾ ಭಾರತಿ : 13 Sep, 2021

 Photo | AFP

ಬೆಲ್ಫಾಸ್ಟ್: ಝಿಂಬಾಬ್ವೆಯ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಬ್ರೆಂಡನ್ ಟೇಲರ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದು, ಸೋಮವಾರ ಐರ್ಲೆಂಡ್ ವಿರುದ್ಧ ಕೊನೆಯ ಪಂದ್ಯ ಆಡಲಿದ್ದಾರೆ.

ಟೇಲರ್ 2004 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು ಮತ್ತು ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಝಿಂಬಾಬ್ವೆಯ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದರು.

"ನನ್ನ ಪ್ರೀತಿಯ ದೇಶಕ್ಕಾಗಿ ನಾಳೆ ನನ್ನ ಕೊನೆಯ ಆಟ ಎಂದು ಭಾರದ ಹೃದಯದಿಂದ ಹೇಳುತ್ತಿರುವೆ. 17 ವರ್ಷಗಳಲ್ಲಿ ತೀವ್ರ ಏರಿಳಿತ ಕಂಡಿದ್ದೇನೆ" ಎಂದು ಟೇಲರ್ ಟ್ವಿಟರ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

34 ವರ್ಷದ ಬ್ಯಾಟ್ಸ್‌ಮನ್ ರವಿವಾರ ಝಿಂಬಾಬ್ವೆ ಕ್ರಿಕೆಟ್, ತಂಡದ ಸದಸ್ಯರು, ಕುಟುಂಬ ಮತ್ತು ಅಭಿಮಾನಿಗಳಿಗೆ ಭಾವನಾತ್ಮಕ ಟಿಪ್ಪಣಿಯಲ್ಲಿ ಧನ್ಯವಾದ ಅರ್ಪಿಸಿದರು.

ಟೇಲರ್ 204 ಏಕದಿನ ಪಂದ್ಯಗಳಿಂದ 6,677 ರನ್ ಗಳಿಸಿದ್ದಾರೆ ಹಾಗೂ ಝಿಂಬಾಬ್ವೆಯ ಮಾಜಿ ಬ್ಯಾಟ್ಸ್‌ಮನ್ ಆ್ಯಂಡಿ ಫ್ಲವರ್ (6,786) ಅವರ ರಾಷ್ಟ್ರೀಯ ದಾಖಲೆಯನ್ನು ಮುರಿಯಲು ಕೇವಲ 112 ರನ್ ಕೊರತೆ ಎದುರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)