varthabharthi


ನಿಮ್ಮ ಅಂಕಣ

ರಾಜ್ಯ ಚುನಾವಣಾ ಆಯೋಗ ಬೇಕೇ?

ವಾರ್ತಾ ಭಾರತಿ : 13 Sep, 2021
-ಕೆ.ಎಸ್. ನಾಗರಾಜ್ ಹನುಮಂತನಗರ, ಬೆಂಗಳೂರು

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ರಾಜ್ಯ ಚುನಾವಣಾ ಆಯೋಗಗಳು ತಮ್ಮ ಅಧಿಕಾರವನ್ನು ಹಾಗೂ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿವೆ. ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿಯನ್ನು ನಿಗದಿಪಡಿಸುವ ಅಧಿಕಾರ ಆಡಳಿತ ಪಕ್ಷಗಳಿಗೆ ಹೋಗಿದ್ದು, ಪಕ್ಷಪಾತದಿಂದ ಕೂಡಿದ ಮೀಸಲಾತಿ ವ್ಯವಸ್ಥೆ ರಾಜಾರೋಷವಾಗಿ ಮುಂದುವರಿದಿದೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆ ಕ್ಷೇತ್ರಗಳ ವಿಂಗಡಣೆಯನ್ನು ಮಾಡುವ ಅಧಿಕಾರವನ್ನು ಸಹ ರಾಜ್ಯ ಸರಕಾರವೇ ತನ್ನ ಬಳಿಯಲ್ಲಿ ಇಟ್ಟುಕೊಂಡಿರುತ್ತದೆ. ಇದರಿಂದಾಗಿ ಚುನಾವಣಾ ಆಯೋಗಕ್ಕೆ ಕೆಲಸವೇ ಇಲ್ಲದಂತಾಗಿದೆ. ಮೀಸಲಾತಿ ನಿಗದಿಪಡಿಸುವುದು ಮತ್ತು ಕ್ಷೇತ್ರ ಪುನರ್ವಿಂಗಡಣೆ ಅಧಿಕಾರ ಚುನಾವಣಾ ಆಯೋಗಕ್ಕೆ ಇದ್ದರೆ ಮಾತ್ರ ನಿಷ್ಪಕ್ಷವಾದ ವ್ಯವಸ್ಥೆಯನ್ನು ಕಾಣಬಹುದು. ಇಲ್ಲಿಯ ತನಕ ರಾಜ್ಯ ಚುನಾವಣಾ ಆಯೋಗ ಘೋಷಣೆ ಮಾಡಿದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬಹಳಷ್ಟು ಸಂದರ್ಭಗಳಲ್ಲಿ ನಡೆಯುವುದಿಲ್ಲ. ರಾಜ್ಯ ಸರಕಾರದ ಅಸಹಕಾರ, ನ್ಯಾಯಾಲಯಗಳ ಆದೇಶ ಇವುಗಳಿಂದಾಗಿ ಚುನಾವಣೆಗಳು, ಚುನಾವಣೆ ಆಯೋಗ ಹೇಳಿದ ದಿನದ ಬದಲಿಗೆ ಸರಕಾರ ಹೇಳಿದಾಗ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯ ಬಗ್ಗೆಯೂ ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚೆಯಾಗಬೇಕು. ಇಲ್ಲದಿದ್ದರೆ, ರಾಜ್ಯ ಚುನಾವಣಾ ಆಯೋಗಗಳನ್ನು ರದ್ದುಮಾಡಿ ಎಲ್ಲಾ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ನೀಡಲಿ. ಹೆಸರಿಗೆ ಮಾತ್ರ ಇರುವ ರಾಜ್ಯ ಚುನಾವಣಾ ಆಯೋಗ ಯಾವುದೋ ಒಂದು ನಿಗಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)