varthabharthi


ರಾಷ್ಟ್ರೀಯ

ಝೊಮ್ಯಾಟೊ ಸಹ-ಸಂಸ್ಥಾಪಕ ಗೌರವ್ ಗುಪ್ತಾ ರಾಜೀನಾಮೆ

ವಾರ್ತಾ ಭಾರತಿ : 14 Sep, 2021

ಹೊಸದಿಲ್ಲಿ, ಸೆ. 14: ಆಹಾರ ವಿತರಣೆ ಸಂಸ್ಥೆ ಝೊಮ್ಯಾಟೊದ ಸಹ-ಸಂಸ್ಥಾಪಕ ಹಾಗೂ ಪೂರೈಕೆ ಮುಖ್ಯಸ್ಥ ಗೌರವ ಗುಪ್ತಾ ತನ್ನ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

 ಶೇರು ಮಾರುಕಟ್ಟೆಯಲ್ಲಿ ಕಂಪೆನಿ ಜುಲೈಯಲ್ಲಿ ನೋಂದಣಿಯಾದ ಎರಡು ತಿಂಗಳ ಬಳಿಕ ಅವರು ರಾಜೀನಾಮೆ ನೀಡಿದ್ದಾರೆ. ಗುಪ್ತಾ ಅವರು ಹುದ್ದೆಗೆ ರಾಜೀನಾಮೆ ನೀಡಿರುವುದನ್ನು ಝೊಮೆಟೊದ ಮುಖ್ಯ ಕಾರ್ಯಕಾರಿ ಅಧಿಕಾರಿ ದೀಪಿಂದರ್ ಗೋಯಲ್ ಟ್ವೀಟ್ ಮಾಡಿ ದೃಢಪಡಿಸಿದ್ದಾರೆ.

‘‘ನಾನು ನಿಮ್ಮ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ’’ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ. ತನ್ನ ರಾಜೀನಾಮೆ ಘೋಷಿಸಿ ಗುಪ್ತಾ ರವಾನಿಸಿದ ಈ ಮೇಲ್ನೊಂದಿಗೆ ಬ್ಲಾಗ್ ಪೋಸ್ಟ್ ಅನ್ನು ಗೋಯಲ್ ಶೇರ್ ಮಾಡಿದ್ದಾರೆ.

‘‘ನನ್ನ ಬದುಕಿನಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತಿದ್ದೇನೆ. ನನ್ನ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಝೊಮ್ಯಾಟೊದಲ್ಲಿದ್ದ ಕಳೆದ ಆರು ವರ್ಷಗಳ ನನ್ನ ಬದುಕಿನ ಅಧ್ಯಾಯಗಳಿಂದ ಹಲವನ್ನು ಕಲಿತಿದ್ದೇನೆ’’ ಎಂದು ಗುಪ್ತಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)