varthabharthi


ರಾಷ್ಟ್ರೀಯ

ತಳಕಚ್ಚಿದ ಆರ್ಥಿಕತೆ, ನಿರುದ್ಯೋಗ ಸಮಸ್ಯೆ

ಹೊಟ್ಟೆಪಾಡಿಗಾಗಿ ಮನೆಯಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿರುವ ಬಡ ಅಫ್ಘನ್ನರು

ವಾರ್ತಾ ಭಾರತಿ : 14 Sep, 2021

photo : twitter/@sheenladaey

ಕಾಬೂಲ್, ಸೆ .14: ಅಫ್ಘಾನಿಸ್ತಾನದಲ್ಲಿ ಅರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದು, ಅದರ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದೆ. ಹಲವಾರು ಅಫ್ಘನ್ನರು ನೆರೆಯ ಪಾಕಿಸ್ತಾನಕ್ಕೆ ಪರಾರಿಯಾಗಲು ಬೇಕಾಗುವ ವೆಚ್ಚವನ್ನು ಹೊಂದಿಸಿಕೊಳ್ಳಲುಅಥವಾ ತಮ್ಮ ಆಹಾರದ ಖರ್ಚನ್ನು ನಿಭಾಯಿಸಲು ತಮ್ಮಲ್ಲಿರುವ ಸೊತ್ತು ಸರಂಜಾಮುಗಳನ್ನು ಅಗ್ಗದ ಬೆಲೆಗೆ ಮಾರುತ್ತಿದ್ದಾರೆಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಂತೆಗಳಲ್ಲಿ ಜರು ತಮ್ಮ ಪಾತ್ರೆಗಳು, ಲೋಟಗಳು ಹಾಗೂ ಗೃಹೋಪಯೋಗಿ ಸಾಮಾಗ್ರಿಗಳನ್ನು ಮಾರುತ್ತಿದ್ದಾರೆ. ಇದರ ಜೊತೆ 90ರ ದಶಕದ ಟಿವಿ ಸೆಟ್ಗಳು ಹಾಗೂ ಹಳೆಯ ಸಿಂಗರ್ ಹೊಲಿಗೆ ಯಂತ್ರಗಳನ್ನು ಕೂಡಾ ಮಾರಾಟಕ್ಕಿಟ್ಟಿದ್ದಾರೆ. ಇದರ ಜೊತೆಗೆ ಹಾಸುಕಂಬಳಿಗಳು, ಹಳೆಯ ಸೋಫಾಗಳು ಹಾಗೂ ಹಾಸಿಗೆಗನ್ನು ಕೂಡಾ ಬಿಕರಿ ಮಾಡುತ್ತಿದ್ದಾರೆ.
 ‌
ಆಗಸ್ಟ್ ತಿಂಗಳ ಮಧ್ಯದಲ್ಲಿ ಅಧಿಕಾರಕ್ಕೇರಿದ ಬಳಿಕ ಅಫ್ಘಾನಿಸ್ತಾನದಲ್ಲಿ ಉದ್ಯೋಗವಕಾಶಗಳು ಬತ್ತಿಹೋಗಿವೆ ಹಾಗೂ ಅಲ್ಲದೆ ನಗದು ಹಣದ ಕೊರತೆಯುಂಟಾಗಿದ್ದು, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಂದ ವಾರಕ್ಕೆ ಗರಿಷ್ಠ 200 ಡಾಲರ್ ( ಸುಮಾರು 14 ಸಾವಿರ) ಹಣವನ್ನು ಮಾತ್ರ ವಿತ್ಡ್ರಾ ಮಾಡಲು ಅವಕಾಶ ನೀಡಲಾಗಿದೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ತಿಳಿಸಿದೆ.
 
‘‘ನಮಗೆ ತಿನ್ನಲು ಏನೂ ಇಲ್ಲ. ನಾವು ಬಡವರಾಗಿದ್ದು ವಿಧಿಯಿಲ್ಲದೆ ಮನೆಯ ಸಾಮಾಗ್ರಿಗಳನ್ನು ಮಾರಾಟಮಾಡಬೇಕಾಗಿ ಬಂದಿದೆ ಎಂದು ಕಾಬೂಲ್ ನ ಬೆಟ್ಟ ಬದಿಯಲ್ಲಿರುವ ಕಾಲನಿ ನಿವಾಸಿ ಮುಹಮ್ಮದ್ ಎಹ್ಸಾನ್ಹೇಳುತ್ತಾನೆ. ತಾನು ಕಾರ್ಮಿಕನಾಗಿದ್ದು, ಪ್ರಸಕ್ತ ಎಲ್ಲಾ ಕಟ್ಟಡ ನಿರ್ಮಾಣ ಯೋಜನೆಗಳು ರದ್ದುಗೊಂಡಿರುವುದರಿದ ತನಗೆ ಸಂಪಾದನೆ ಇಲ್ಲದೆ,ಕಂಗಾಲಾಗಿರುವುದಾಗಿ ಆತ ತಿಳಿಸಿದ್ದಾನೆ.‘‘ಕಾಬೂಲ್ನಲ್ಲಿ ಭಾರೀ ಸಂಖ್ಯೆಯಲ್ಲಿ ಶ್ರೀಮಂತರಿದ್ದರು. ಆದರೆ ಅವರಲ್ಲಿ ಹೆಚ್ಚಿನವರು ಪಲಾಯನ ಮಾಡಿದ್ದಾರೆ’ ಎಂದು ಆತ ಹೇಳುತ್ತಾನೆ.
 
ಬಡದೇಶವಾದ ಅಫ್ಘಾನಿಸ್ತಾನವು ಈಗಾಗಲೇ ತೀವ್ರ ಬರ ಹಾಗೂ ಆಹಾರದ ಕೊರತೆಯನ್ನು ಎದುರಿಸುತ್ತಿದೆ. ಇದರ ಜೊತೆಗೆ ತಾಲಿಬಾನ್ ಆಡಳಿತದ ಚುಕ್ಕಾಣಿ ಹಿಡಿಯುವ ಮುನ್ನ ಕೋವಿಡ್ ಸಾಂಕ್ರಾಮಿಕದ ಹಾವಳಿಯು ದೇಶದ ಆರ್ಥಿಕತೆಯ ಮೇಲೆ ಇನ್ನಷ್ಟು ಹೊರೆಯನ್ನುಂಟು ಮಾಡಿದೆ. ಇದೀಗ ವಿದೇಶಿ ಪಡೆಗಳ ನಿರ್ಗಮನದ ಬಳಿಕ ನೆರವು ಕೂಡಾ ಕಡಿತಗೊಂಡಿರುವುದರಿಂದ ಅಫ್ಘಾನ್ನ ಆರ್ಥಿಕತೆ ತಳಮಟ್ಟಕ್ಕೆ ಕುಸಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)