varthabharthi


ರಾಷ್ಟ್ರೀಯ

ಟಿಎಂಸಿಯಿಂದ ರಾಜ್ಯ ಸಭೆಗೆ ಸುಶ್ಮಿತಾ ದೇವ್ ನಾಮನಿರ್ದೇಶನ

ವಾರ್ತಾ ಭಾರತಿ : 14 Sep, 2021

ಕೋಲ್ಕತಾ, ಸೆ. 14: ತೃಣಮೂಲ ಕಾಂಗ್ರೆಸ್ ಪಕ್ಷ ಸುಶ್ಮಿತಾ ದೇವ್ ಅವರನ್ನು ಮಂಗಳವಾರ ರಾಜ್ಯ ಸಭೆಗೆ ನಾಮ ನಿರ್ದೇಶಿಸಿದೆ. ಸುಶ್ಮಿತ್ ದೇವ್ ಅವರು ಇತ್ತೀಚೆಗೆ ಕಾಂಗ್ರೆಸ್ ತ್ಯಜಿಸಿ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದರು.

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹಾಗೂ ಮಹಿಳಾ ಸಬಲೀಕರಣದ ಸಂಬಂಧ ಮಮತಾ ಬ್ಯಾನರ್ಜಿ ಅವರ ದೂರದೃಷ್ಟಿತ್ವದಿಂದಾಗಿ ನಮ್ಮ ಸಮಾಜ ಮತ್ತಷ್ಟು ಸಾಧಿಸಲು ಸಾಧ್ಯವಾಗಿದೆ ಎಂದು ಸುಶ್ಮಿತ್ ದೇವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)