varthabharthi


ಕರಾವಳಿ

ಅಡ್ಯನಡ್ಕ: ಫಾರ್ಮ್ ಹೌಸ್ ಕೆರೆಯಲ್ಲಿ ಮುಳುಗಿ ಮಂಗಳೂರಿನ ವೈದ್ಯೆ ಮೃತ್ಯು

ವಾರ್ತಾ ಭಾರತಿ : 15 Sep, 2021

ಬಂಟ್ವಾಳ, ಸೆ.15: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ವಾರಣಾಸಿ ಫಾರ್ಮ್ ಹೌಸ್ ನ ಕೆರೆಯಲ್ಲಿ ಮುಳುಗಿ ಯುವ ವೈದ್ಯೆಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

ಮೃತರನ್ನು ಮಂಗಳೂರು ಮೂಲದ ವೈದ್ಯೆ ಡಾ.ಮೈಜಿ ಕರೋಲ್ ಫೆರ್ನಾಂಡಿಸ್(31) ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಡಾ.ಮೈಜಿ ಬುಧವಾರ ಬೆಳಗ್ಗೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೃಷಿ ಅಧ್ಯಯನದ ಬಗ್ಗೆ ಆಸಕ್ತಿ ಹೊಂದಿದ್ದ ಡಾ.ಮೈಜಿ ಅಡ್ಯನಡ್ಕಕ್ಕೆ ಅಧ್ಯಯನಕ್ಕೆಂದು ತೆರಳಿದ್ದರೆನ್ನಲಾಗಿದೆ. ಮಂಗಳವಾರ ಸಂಜೆ ಯಾರು ಇಲ್ಲದ ಸಮಯ ಫಾರ್ಮ್ ಹೌಸ್ ನಲ್ಲಿದ್ದ ಕೆರೆಯಲ್ಲಿ ಈಜಲು ಹೋದವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದರೆನ್ನಲಾಗಿದೆ. ಬಳಿಕ ಇವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ವತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)