varthabharthi


ನಿಮ್ಮ ಅಂಕಣ

ಮೌಲ್ಯಮಾಪನ ನಿಷ್ಪಕ್ಷವಾಗಿರಲಿ

ವಾರ್ತಾ ಭಾರತಿ : 16 Sep, 2021
-ಸುರೇಶ ಗೌರೆ, ನವನಿಹಾಳ, ಕಲಬುರಗಿ

ಮಾನ್ಯರೇ,

  2020 -21ನೇ ಸಾಲಿನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆದರೆ ವಿಪರ್ಯಾಸವೆಂದರೆ, ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಾಹ್ಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿದ್ದರೂ ಆಂತರಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾರೆ. ಈ ರೀತಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಡಿಮೆ ಆಂತರಿಕ ಅಂಕ ಕೊಡುವಲ್ಲಿ ಅವರ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನದ ಅರಿವಿನ ಕೊರತೆ ಇರಬಹುದು ಅಥವಾ ಖಾಸಗಿ ಶಾಲೆಯಲ್ಲಿ ಓದುವ ನಮ್ಮ ಮಕ್ಕಳಿಗಿಂತಲೂ ಇವರಿಗೇಕೆ ಹೆಚ್ಚಿನ ಅಂಕ ಕೊಡಬೇಕು ಎಂಬ ಮನಸ್ಥಿತಿಯೂ ಇರಬಹುದು. ಏಕೆಂದರೆ ಹೆಚ್ಚಿನ ಶಿಕ್ಷಕರ ಮಕ್ಕಳು ಖಾಸಗಿ ಶಾಲೆಯಲ್ಲಿಯೇ ಓದುತ್ತಿರುವುದು. ಏನೇ ಇರಲಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡುವಾಗ ಶಿಕ್ಷಕರು ಆತ್ಮವಿಮರ್ಶೆ ಮಾಡಿಕೊಂಡು ಅಂಕಗಳನ್ನು ನೀಡುವುದು ಒಳ್ಳೆಯದು. ವಿದ್ಯಾರ್ಥಿಗಳು ವೈವಿಧ್ಯಮಯವಾಗಿರುವ, ಭಿನ್ನವಾಗಿರುವ ವ್ಯಕ್ತಿತ್ವವನ್ನು ಹೊಂದಿರುವುದರಿಂದ ಶಿಕ್ಷಕರು ಅತ್ಯಂತ ಜಾಗರೂಕತೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಮೌಲ್ಯಮಾಪನ ಮಾಡುವುದು ತುಂಬಾ ಅವಶ್ಯಕವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)