varthabharthi


ಕರ್ನಾಟಕ

ತಿಂಗಳಲ್ಲಿ ಒಂದು ದಿನ ಕನ್ನಡ ಭವನದಲ್ಲಿ ಲಭ್ಯವಿರುತ್ತೇನೆ: ಸಚಿವ ವಿ.ಸುನೀಲ್ ಕುಮಾರ್

ವಾರ್ತಾ ಭಾರತಿ : 17 Sep, 2021

ಸಚಿವ ವಿ.ಸುನೀಲ್ ಕುಮಾರ್ 

ಬೆಂಗಳೂರು, ಸೆ.17: ಕಲಾವಿದರ ಸಮಸ್ಯೆ ಹಾಗೂ ಅವರ ಕುಂದುಕೊರತೆಗಳನ್ನು ವಿಚಾರಿಸಲು ಇನ್ನು ಮುಂದೆ ಕನ್ನಡ ಭವನದಲ್ಲಿಯೇ ನಾನು ತಿಂಗಳಲ್ಲಿ ಒಂದು ದಿನ ಲಭ್ಯವಿರುತ್ತೇನೆ, ಈ ಪ್ರಕ್ರಿಯೆಯನ್ನು ಇಂದಿನಿಂದ ಆರಂಭಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಶುಕ್ರವಾರ ನಗರದ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ಮೊದಲ ಮಹಡಿಯಲ್ಲಿ ಸಚಿವರಿಗಾಗಿ ನೀಡಲಾದ ಕೊಠಡಿಯನ್ನು ಉದ್ಘಾಟಿಸಿ ಕಾರ್ಯಾರಂಭ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ನಿಯಮಿತ ದಿನಗಳಲ್ಲಿ ನಾನು ಕಲಾವಿದರಿಗೆ ಇಲ್ಲಿ ಲಭ್ಯವಿರುತ್ತೇನೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ.ಮಹೇಂದ್ರ ಈ ಸಂದರ್ಭದಲ್ಲಿ ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)