varthabharthi


ಕರಾವಳಿ

ಜೆಸಿಐ ಸಪ್ತಾಹ ಗಂಗೋತ್ರಿ ಉತ್ಸವ ಸಮಾರೋಪ

ವಾರ್ತಾ ಭಾರತಿ : 18 Sep, 2021

ಉಳ್ಳಾಲ : ಜೆಸಿಐ ಮಂಗಳ ಗಂಗೋತ್ರಿ ಕೊಣಾಜೆ ಇದರ ವತಿಯಿಂದ ಜೆಸಿ ಸಪ್ತಾಹ ಗಂಗೋತ್ರಿ ಉತ್ಸವ  'ಬಂಧನ್ 2021 ' ಇದರ ಸಮಾರೋಪ ಕಾರ್ಯಕ್ರಮವು ಕುತ್ತಾರ್ ಬಾಲ ಸಂರಕ್ಷಣಾ ಕೇಂದ್ರದಲ್ಲಿ  ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜೆಸಿಐ ಅಧ್ಯಕ್ಷ ಫ್ರಾಂಕ್ಲಿನ್ ಫ್ರಾನ್ಸಿಸ್ ಕುಟ್ಟಿನ್ಹ ವಹಿಸಿದ್ದರು. ತ್ಯಾಗಂ ಹರೇಕಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ.ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಶಾಂತ್ ನಾಯಕ್, ಅರುಣ್ ಉಳ್ಳಾಲ, ಪ್ರಕಾಶ್ ಶೆಟ್ಟಿ, ಹಾಗೂ ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆಟಿ ಸುವರ್ಣ, ಪವಿತ್ರ ಗಣೇಶ್, ಕಮಲಾಕ್ಷ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಮಾ ಹೆಬ್ಬಾರ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)