varthabharthi


ಕರಾವಳಿ

ಸಿಎ ಪರೀಕ್ಷೆಯಲ್ಲಿ ಅನುತ್ತೀರ್ಣ: ವಿದ್ಯಾರ್ಥಿ ನಾಪತ್ತೆ

ವಾರ್ತಾ ಭಾರತಿ : 22 Sep, 2021

ಅಮಾಸೆಬೈಲು, ಸೆ22: ಸಿಎ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಚಿಂತೆಯಲ್ಲಿ ವಿದ್ಯಾರ್ಥಿಯೊರ್ವ ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಸೆ.20ರಂದು ಸಂಜೆ ನಡೆದಿದೆ.

ಮಡಾಮಕ್ಕಿ ಗ್ರಾಮದ ಸೂರ್ಲು ನಿವಾಸಿ ಪ್ರೇಮಾ ಹಾಗೂ ಶಂಕರ ಶೆಟ್ಟಿ ದಂಪತಿ ಮಗ ಅಖಿಲ್ ಕುಮಾರ್ ಶೆಟ್ಟಿ(32) 2 ವರ್ಷಗಳಿಂದ ಹೆಬ್ರಿ ರೈಸ್ ಮಿಲ್ಲಿಗೆ ಕೆಲಸಕ್ಕೆ ಹೋಗುತ್ತಿದ್ದು ಸೆ.20ರಂದು ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಇವರು ಬಿಕಾಂ ವ್ಯಾಸಂಗ ಮಾಡಿ ಸಿಎ ಪರೀಕ್ಷೆ ಬರೆದಿದ್ದು, ಈ ಪರೀಕ್ಷೆಯ ಎರಡು ವಿಷಯದಲ್ಲಿ ಅನುತ್ತೀರ್ಣನಾಗಿರುವ ಚಿಂತೆಯಲ್ಲಿ ಮನೆ ಬಿಟ್ಟು ಹೋಗಿರುವ ಸಾಧ್ಯತೆ ಎಂದು ದೂರಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)