ಝೈಬುನ್ನಿಸಾ
ಮಂಗಳೂರು, ಅ.2: ಕುದ್ರೋಳಿ ನಿವಾಸಿ, ಎಂ.ಎ.ಅಬ್ದುಲ್ ರಝಾಕ್ ಅವರ ಪತ್ನಿ ಝೈಬುನ್ನಿಸಾ(67) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ ನಿಧನರಾಗಿದ್ದಾರೆ.
ಮೃತರು ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತದೇಹವು ಪಾಂಡೇಶ್ವರದಲ್ಲಿರುವ ಮಗಳ ಮನೆಯಲ್ಲಿದ್ದು, ದಫನ ಕಾರ್ಯವು ರವಿವಾರ ಬೆಳಗ್ಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story