varthabharthi


ಕರ್ನಾಟಕ

ತೀರ್ಥಹಳ್ಳಿ: ಮಾರ್ಗ ಮಧ್ಯೆ ಬೈಕ್ ನಿಲ್ಲಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ

ವಾರ್ತಾ ಭಾರತಿ : 13 Oct, 2021

ಶಿವಮೊಗ್ಗ: ಯುವಕನೊರ್ವ ಮನೆಯಿಂದ ಬೈಕ್ ನಿಂದ ಹೊರಟು ಮಾರ್ಗ ಮಧ್ಯದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆ ತೀರ್ಥಹಳ್ಳಿ  ತಾಲೂಕಿನ ಕೊಣಂದೂರು ಸಮೀಪದ ಅಕ್ಲಾಪುರದಲ್ಲಿ ನಡೆದಿದೆ.

 ಮೃತ ಯುವಕ ಅಕ್ಲಾಪುರ ವಾಸಿ ರಾಘವೇಂದ್ರ(40) ಎಂದು ಗುರುತಿಸಲಾಗಿದೆ.

ಮನೆಯಿಂದ ದತ್ತರಾಜಪುರ ಮಾರ್ಗದಲ್ಲಿ ಹೋಗುವಾಗ ಸೀಮೆಎಣ್ಣೆ ಕೊಂಡೊಯ್ದು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮನೆಯಲ್ಲಿ ಆಸ್ತಿವ್ಯಾಜ್ಯದ ವೈಯಕ್ತಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.ಮೃತ ವ್ಯಕ್ತಿ ಪತ್ನಿ,ಎರಡು ಮಕ್ಕಳನ್ನು ಅಗಲಿದ್ದು, ಈ ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)