varthabharthi


ಅಂತಾರಾಷ್ಟ್ರೀಯ

ಲಂಡನ್ ನಲ್ಲಿ ಬೆಂಗಳೂರಿನ ಬಾಲಕ ವಿದ್ಯುನ್ ಹೆಬ್ಬಾರ್ ಗೆ ಪ್ರತಿಷ್ಠಿತ ‘ವರ್ಷದ ಯುವ ಛಾಯಾಗ್ರಾಹಕ ಪ್ರಶಸ್ತಿ’

ವಾರ್ತಾ ಭಾರತಿ : 13 Oct, 2021

Credits: Vidyun R Hebbar/Wildlife Photographer of the Year

ಲಂಡನ್: 2021 ರ ಆವೃತ್ತಿಯ ಪ್ರತಿಷ್ಠಿತ ವನ್ಯಜೀವಿ ಛಾಯಾಗ್ರಾಹಕ ಸ್ಪರ್ಧೆಯಲ್ಲಿ ಬೆಂಗಳೂರಿನ 10ರ ವಯಸ್ಸಿನ ಬಾಲಕ ವಿದ್ಯುನ್ ಹೆಬ್ಬಾರ್ “ವರ್ಷದ ಯುವ ಛಾಯಾಗ್ರಾಹಕ’'ಪ್ರಶಸ್ತಿಗೆ ಭಾಜನರಾಗಿದ್ದಾರೆ.

1965 ರಿಂದ ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಿಂದ ಪ್ರತಿವರ್ಷವೂ ಆಯೋಜಿಸಲ್ಪಡುವ  ಈ ಸ್ಪರ್ಧೆಯು ಪ್ರಪಂಚದಾದ್ಯಂತದ 50,000 ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಆಕರ್ಷಿಸಿತು. ಈ ವರ್ಷದ ಸ್ಪರ್ಧೆಯು 19 ವಿಭಿನ್ನ ವಿಭಾಗಗಳನ್ನು ಹೊಂದಿತ್ತು, ಇದರಲ್ಲಿ ಹೊಸ ವಿಭಾಗಗಳಾದ "ವೆಟ್ ಲ್ಯಾಂಡ್ಸ್-ದಿ ಬಿಗ್ಗರ್ ಪಿಕ್ಚರ್" ಮತ್ತು "ಓಶಿಯನ್ಸ್ –ದಿ ಬಿಗ್ಗರ್ ಪಿಕ್ಚರ್" ಇದ್ದವು.

ವಿಭಿನ್ನ ವಿಭಾಗಗಳ ಜೊತೆಗೆ ವರ್ಷದ ಒಟ್ಟಾರೆ ವನ್ಯಜೀವಿ ಛಾಯಾಗ್ರಾಹಕರನ್ನು ಒಳಗೊಂಡಿತ್ತು.

"ವರ್ಷದ ಯುವ ಛಾಯಾಗ್ರಾಹಕ" ಪ್ರಶಸ್ತಿಯನ್ನು ಭಾರತದ ಬೆಂಗಳೂರಿನ 10 ವರ್ಷದ ಬಾಲಕ ವಿದ್ಯುನ್ ಹೆಬ್ಬಾರ್ ಗೆದ್ದುಕೊಂಡರು. ಸಂಕೀರ್ಣವಾದ ಟೆಂಟ್ ಬಲೆಯ ಜೇಡದ ಚಿತ್ರವನ್ನು ಹಿನ್ನೆಲೆಯಲ್ಲಿ ರಿಕ್ಷಾ ಹಾದುಹೋಗುವ ವೇಳೆ ಹೆಬ್ಬಾರ್ ಸೆರೆ ಹಿಡಿದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)