varthabharthi


ಕ್ರೀಡೆ

ಐಪಿಎಲ್ ಕ್ವಾಲಿಫೈಯರ್-2:ಕೋಲ್ಕತಾ ಗೆಲುವಿಗೆ 136 ರನ್ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

ವಾರ್ತಾ ಭಾರತಿ : 13 Oct, 2021

photo: twitter

ಶಾರ್ಜಾ: ಚೊಚ್ಚಲ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫಾರ್ಮ್ ನಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಐಪಿಎಲ್ ನ ಎರಡನೇ ಕ್ವಾಲಿಫೈಯರ್ ಪಂದ್ಯದ ಗೆಲುವಿಗೆ 136 ರನ್ ಗುರಿ ನೀಡಿತು.

ಬುಧವಾರ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಡೆಲ್ಲಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಡೆಲ್ಲಿ ಪರವಾಗಿ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್(36) ಗರಿಷ್ಠ ಸ್ಕೋರ್ ಗಳಿಸಿದರು. ಶ್ರೇಯಸ್ ಅಯ್ಯರ್ ಔಟಾಗದೆ 30 ರನ್ ಗಳಿಸಿದರು. ಪೃಥ್ವಿ ಶಾ(18), ಹೆಟ್ಮೆಯರ್(17) ಹಾಗೂ ಸ್ಟೋನಿಸ್(18)ಎರಡಂಕೆಯ ಸ್ಕೋರ್ ಗಳಿಸಿದರು.

ವರುಣ್ ಚಕ್ರವರ್ತಿ(2-26)ಯಶಸ್ವಿ ಬೌಲರ್ ಎನಿಸಿಕೊಂಡರು. ಶಿವಂ ಮಾವಿ(1-27) ಹಾಗೂ ಫರ್ಗ್ಯುಸನ್(1-26) ತಲಾ ಒಂದು ವಿಕೆಟ್ ಪಡೆದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)