ಸೌರವ್ಯೂಹದಾಚೆಗಿನ ಗ್ರಹಗಳಿಂದ ರೇಡಿಯೋ ಸಿಗ್ನಲ್
ಬಾಹ್ಯಾಕಾಶ ಜೀವಿಗಳಿರುವ ಸಾಧ್ಯತೆ?
photo: google.com/maps
ಲಂಡನ್,ಅ.13: ವಿಶ್ವದ ಅತ್ಯಂತ ಶಕ್ತಿಶಾಲಿ ರೇಡಿಯೋ ಆ್ಯಂಟೆನಾವಾದ ನೆದರ್ಲ್ಯಾಂಡ್ನ ಲೋ ಫ್ರಿಕ್ವಿನ್ಸಿ ಆರ್ರೆ (ಲೋಫಾರ್)ಯು ದೂರದ ನಕ್ಷತ್ರ ಮಂಡಲಗಳಿಂದ ರೇಡಿಯೋ ಸಂಕೇತಗಳನ್ನು ಗ್ರಹಿಸಿರುವುದಾಗಿ ತಿಳಿದುಬಂದಿದೆ. ಈ ನಕ್ಷತ್ರಗಳ ಸುತ್ತ ತಿರುಗುತ್ತಿರುವ ಗ್ರಹಗಳಿಂದ ರೇಡಿಯೋ ಸಂಕೇತ ಬಂದಿರಬಹುದೆಂದು ಅವರು ಶಂಕಿಸಿದ್ದಾರೆ.
ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಬೆಂಜಮಿನ್ ಪೋಪ್ ಹಾಗೂ ನೆದರ್ಲ್ಯಾಂಡ್ನ ರಾಷ್ಟ್ರೀಯ ಖಗೋಳ ವೀಕ್ಷಣಾಲಯ ಆಸ್ಟ್ರೋನ್ನ ವಿಜ್ಞಾನಿಗಳು ಈ ರೇಡಿಯೋ ಸಿಗ್ನಲ್ಗಳನ್ನು ಪತ್ತೆಹಚ್ಚಿದ್ದಾರೆ.
ರೇಡಿಯೋ ಸಿಗ್ನಲ್ಗಳನ್ನು ಪತ್ತೆಹಚ್ಚುವ ನೂತನ ತಂತ್ರಜ್ಞಾನವು ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇದರಿಂದಾಗಿ ನಕ್ಷತ್ರಪುಂಜಗಳಲ್ಲಿರುವ ಗ್ರಹಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಈ ನೂತನ ತಂತ್ರಜ್ಞಾನವು ದೂರದ ನಕ್ಷತ್ರ ರೇಡಿಯೋ ಸಿಗ್ನಲ್ಗಳು ದೂರದ ನಕ್ಷತ್ರಮಂಡಲಗಳಲ್ಲಿರುವ ಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡಿದೆ ಎಂದು ಡಾ.ಬೆಂಜಮಿನ್ ಪೋಪ್ ತಿಳಿಸಿದ್ದಾರೆ.