varthabharthi


ರಾಷ್ಟ್ರೀಯ

ವೇಗನ್ ಲೆದರ್ ಉತ್ಪಾದನೆ ಯೋಜನೆಗೆ ಮೇಘಾಲಯ ಪರಿಸರ ಸಚಿವರಿಗೆ ಪೇಟಾ ಪ್ರಶಸ್ತಿ

ವಾರ್ತಾ ಭಾರತಿ : 13 Oct, 2021

ಶಿಲ್ಲಾಂಗ್, ಅ. 13: ಮೇಘಾಲಯದಲ್ಲಿ ಚರ್ಮೋತ್ಪನ್ನಗಳಿಗ ಪರ್ಯಾಯವಾಗಿ ವೇಗನ್ ಲೆದರ್ (ಸಸ್ಯಜನ್ಯ ಚರ್ಮ) ಉತ್ಪಾದನೆಯ ಯೋಜನೆಗೆ ಮೇಘಾಲಯದ ಪರಿಸರ ಖಾತೆ ಸಚಿವ ಪಿ.ಕೆ. ಸಂಗ್ಮಾ ಅವರಿಗೆ ‘ಪ್ರೋಗ್ರೆಸಿವ್ ಕಾನ್ಸೆಪ್ಟ್ ಅವಾರ್ಡ್’ ನೀಡಲು ಪೇಟಾ ಇಂಡಿಯಾ ನಿರ್ಧರಿಸಿದೆ. ಪೇಟಾದ ಸ್ವಯಂ ಸೇವಕರು ಶೀಘ್ರದಲ್ಲಿ ಈ ಪ್ರಶಸ್ತಿಯನ್ನು ಸಚಿವರಿಗೆ ಪ್ರದಾನಿಸಲಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ರಾಜ್ಯದ ಬೆಟ್ಟ ಪ್ರದೇಶದಲ್ಲಿ ಹೇರಳವಾಗಿ ಲಭ್ಯವಾಗುವ ಅನಾನಸು ಬಳಸಿ ಚರ್ಮ ಉತ್ಪಾದಿಸಲು ಮೇಘಾಲಯ ಸರಕಾರ ಯೋಜಿಸುತ್ತಿದೆ ಎಂದು ಸಂಗ್ಮಾ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಘೋಷಿಸಿದ್ದರು. ಹವಾಮಾನ ಬದಲಾವಣೆಯ ವಸ್ತು ಸಂಗ್ರಹಾಲಯ ತೆರೆಯುವ ಹಾಗೂ ಶಾಲಾ ಪಠ್ಯ ಕ್ರಮದಲ್ಲಿ ಈ ವಿಷಯವನ್ನು ಪರಿಚಯಿಸುವ ಯೋಜನೆ ಮೇಘಾಲಯ ಆಡಳಿತಕ್ಕೆ ಇದೆ ಎಂದು ಕೂಡ ಸಂಗ್ಮಾ ಅವರು ತಿಳಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)