varthabharthi


ರಾಷ್ಟ್ರೀಯ

ಪಂಜಾಬ್ ನಲ್ಲಿ ವಿದ್ಯುತ್ ಶುಲ್ಕ ಮನ್ನಾ:ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಘೋಷಣೆ

ವಾರ್ತಾ ಭಾರತಿ : 18 Oct, 2021

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಇಂದು ತಮ್ಮ ವಿದ್ಯುತ್ ಶುಲ್ಕ ಮನ್ನಾದ ಸಂಕೇತವಾಗಿ ವಿದ್ಯುತ್ ಬಿಲ್‌ಗಳ ಪ್ರತಿಗಳನ್ನು ಸುಟ್ಟು ಹಾಕಿದರು.

 "ನಾವು ಭರವಸೆ ನೀಡಿದ್ದೇವೆ ಹಾಗೂ  ಅದನ್ನು ನಾವು ಈಡೇರಿಸಿದ್ದೇವೆ" ಎಂದು ಚನ್ನಿ ಟ್ವೀಟ್ ಮಾಡಿದ್ದಾರೆ.

ಪಾವತಿ ಮಾಡದ ವಿದ್ಯುತ್ ಶುಲ್ಕಗಳನ್ನು  ಮನ್ನಾ ಮಾಡುವ ಪಂಜಾಬ್ ಸರಕಾರದ ನಿರ್ಧಾರವನ್ನು ಇಂದು ಜಾರಿಗೆ ತರಲಾಗಿದೆ.

ಪಂಜಾಬ್ ಸರಕಾರ ಕಳೆದ ತಿಂಗಳು 2 ಕೆಡಬ್ಲ್ಯು ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವವರ ವಿದ್ಯುತ್ ಶುಲ್ಕಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿತ್ತು. ಗ್ರಾಹಕರು ತಮ್ಮ ಶುಲ್ಕಗಳನ್ನು ಪಾವತಿಸಲು ಸಾಧ್ಯವಾಗದೆ ಸಂಪರ್ಕ ಕಡಿತಗೊಂಡ ವಿದ್ಯುತ್ ಸಂಪರ್ಕಗಳನ್ನು ಸಹ ಯಾವುದೇ ದಂಡವಿಲ್ಲದೆ ಮರುಸ್ಥಾಪಿಸಲಾಗುವುದು ಎಂದು ಅದು ನಿರ್ಧರಿಸಿತು.

ಮನ್ನಾ ಮಾಡುವುದರಿಂದ ರಾಜ್ಯದ ಬೊಕ್ಕಸಕ್ಕೆ 1,200 ಕೋಟಿ ರೂ.ಹೆಚ್ಚುವರಿ ಹೊರೆಯಾಗಲಿದೆ.

ಪಂಜಾಬ್ ಸಂಪುಟ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರ ನೀರಿನ ಶುಲ್ಕ ಬಾಕಿ ಮನ್ನಾ ಮಾಡಲು ನಿರ್ಧರಿಸಿದೆ.

ಹೊಸ ಮುಖ್ಯಮಂತ್ರಿಯ ಚುನಾವಣಾ ಭರವಸೆಗಳಲ್ಲೊಂದಾದ ಮನ್ನಾಗಳು ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಂದಿರುವುದರಿಂದ ಇವು ಮಹತ್ವ ಪಡೆದುಕೊಂಡಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)