varthabharthi


ಕರ್ನಾಟಕ

ನಟಿ ಸವಿ ಮಾದಪ್ಪ ಸಾವಿನ ರಹಸ್ಯ ಬಯಲು

ವಾರ್ತಾ ಭಾರತಿ : 18 Oct, 2021

ಬೆಂಗಳೂರು, ಅ.18: ಕನ್ನಡ ಚಿತ್ರರಂಗದ ನಟಿ ಸೌಜನ್ಯ ಎಂದೇ ಗುರುತಿಸಿಕೊಂಡಿದ್ದ ಸವಿ ಮಾದಪ್ಪ ಸಾವಿನ ತನಿಖಾ ವರದಿ ಬಹಿರಂಗೊಂಡಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢವಾಗಿದೆ.

ಈ ಅಂಶ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಪತ್ತೆಯಾಗಿದೆ. ದೊಡ್ಡಬೆಲೆ ಗ್ರಾಮದ ಅಪಾರ್ಟ್‍ಮೆಂಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ಮೃತಪಟ್ಟಿದ್ದ ಸವಿ ಮಾದಪ್ಪ ಅವರದು ಆತ್ಮಹತ್ಯೆಯಲ್ಲ ಕೊಲೆ ಎನ್ನುವ ಅನುಮಾನವನ್ನು ಪೋಷಕರು ವ್ಯಕ್ತಪಡಿಸಿದ್ದರು. 

ಈ ಸಂಬಂಧ ಪ್ರಕರಣ ದಾಖಲಿಸಿದ್ದ ಕುಂಬಳಗೋಡು ಠಾಣಾ ಪೊಲೀಸರು ಸವಿ ಮಾದಪ್ಪ ಗೆಳೆಯ ವಿವೇಕ್ ಸೇರಿ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ ಬೆನ್ನಲ್ಲೇ ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎನ್ನುವುದು ದೃಢಪಟ್ಟು ಎಲ್ಲ್ಲ ಸಂಶಯಗಳಿಗೆ ತೆರೆ ಎಳೆದಿದೆ. 

ಕೊಠಡಿಯ ಫ್ಯಾನ್‍ಗೆ ಸ್ವತಃ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸವಿ ಮಾದಪ್ಪ ಅವರು ಡೆತ್‍ನೋಟ್ ಬರೆದಿಟ್ಟಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)