varthabharthi


ಕ್ರೀಡೆ

ಫ್ರಾನ್ಸ್ ನಲ್ಲಿ ಕತ್ತಿವರಸೆ ಪ್ರಶಸ್ತಿ ಗೆದ್ದ ಭವಾನಿ ದೇವಿ

ವಾರ್ತಾ ಭಾರತಿ : 19 Oct, 2021

photo:twitter/@IamBhavaniDevi

ಪ್ಯಾರಿಸ್, ಅ. 18: ಫ್ರಾನ್ಸ್‌ನಲ್ಲಿ ನಡೆದ ಶಾರ್ಲೆವಿಲ್ ನ್ಯಾಶನಲ್ ಕತ್ತಿವರಸೆ ಸ್ಪರ್ಧೆಯಲ್ಲಿ ಭಾರತದ ಕತ್ತಿವರೆಸೆ ಪಟು ಭವಾನಿ ದೇವಿ ಮಹಿಳೆಯರ ವೈಯಕ್ತಿಕ ಸಾಬರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ವಿಷಯವನ್ನು 28 ವರ್ಷದ ಅತ್ಲೀಟ್ ಟ್ವೀಟ್ ಮಾಡಿದ್ದಾರೆ. ‘‘ಫ್ರಾನ್ಸ್‌ನಲ್ಲಿ ನಡೆದ ಶಾರ್ಲೆವಿಲ್ ನ್ಯಾಶನಲ್ ಕಾಂಪಿಟೀಶನ್‌ನಲ್ಲಿ ಮಹಿಳೆಯರ ವೈಯಕ್ತಿಕ ಸಾಬರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. ಕೋಚ್ ಕ್ರಿಶ್ಚಿಯನ್ ಬೋವರ್, ಅರ್ನಾಡ್ ಶ್ನೈಡರ್ ಮತ್ತು ತಂಡದ ಎಲ್ಲ ಸಹ ಆಟಗಾರರಿಗೆ ಕೃತಜ್ಞತೆಗಳು. ಋತುವಿನ ಅತ್ಯುತ್ತಮ ಆರಂಭಕ್ಕಾಗಿ ಎಲ್ಲರಿಗೂ ಅಭಿನಂದನೆಗಳು’’ ಎಂಬುದಾಗಿ ಪ್ರಶಸ್ತಿ ಗೆದ್ದ ಬಳಿಕ ಭವಾನಿ ದೇವಿ ಟ್ವೀಟ್ ಮಾಡಿದ್ದಾರೆ.

ಕತ್ತಿ ವರಸೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಭವಾನಿ ದೇವಿ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅವರು 64ರ ಸುತ್ತಿನ ಪಂದ್ಯದಲ್ಲಿ ಟ್ಯುನೀಶಿಯದ ನಾದಿಯಾ ಬೆನ್ ಅಝೀಝಿಯನ್ನು 15-3 ಅಂಕಗಳಿಂದ ಸೋಲಿಸಿದ್ದರು. ಆದರೆ, 32ರ ಸುತ್ತಿನಲ್ಲಿ ಫ್ರಾನ್ಸ್‌ನ ಮನೋನ್ ಬ್ರೂನೆಟ್ ವಿರುದ್ಧ ಪರಾಭವಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)