ಕಿನ್ಯ : ಶೇಖ ಮರ್ಕಝ್ನಲ್ಲಿ ಮೀಲಾದುನ್ನಬಿ ಕಾರ್ಯಕ್ರಮ
ಉಳ್ಳಾಲ, ಅ.19: ಕಿನ್ಯ ಕುತುಬಿ ನಗರ ಶೇಖ ಮರ್ಕಝ್ ಯೂತ್ ವೆಲ್ಫೇರ್ ಅಸೋಸಿಯೇಶನ್ನ 30ನೇ ವಾರ್ಷಿಕೋತ್ಸವ ಹಾಗೂ ಮೀಲಾದುನ್ನಬಿ ಆಚರಣೆ ಮಂಗಳವಾರ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷ ಬಿ.ಎಂ.ಇಸ್ಮಾಯೀಲ್ ಹಾಜಿ ಧ್ವಜಾರೋಹಣಗೈದರು ಸೈಯದ್ ಶಿಹಾಬುದ್ದೀನ್ ತಂಙಳ್ ದುಆಗೈದರು. ಕಿನ್ಯಾ ಕೇಂದ್ರ ಜುಮಾ ಮಸೀದಿಯ ಖತೀಬ್ ಪತ್ತಾಹ್ ಪೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಭಾಷಣ ಮಾಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಎ.ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕುತುಬಿ ನಗರ ಮಸೀದಿಯ ಖತೀಬ್ ಎನ್.ಎಂ.ಅಬ್ದುಲ್ ರಝಾಕ್ ಮದನಿ, ಮುಅಲ್ಲಿಮರಾದ ರಫೀಕ್ ಸಖಾಫಿ, ಹಂಝ ಝುಹ್ರಿ, ಅಬ್ದುಲ್ ರಝಾಕ್ ಮುಸ್ಲಿಯಾರ್, ಗ್ರಾಪಂ ಸದಸ್ಯ ಸಿರಾಜುದ್ದೀನ್ ಕಿನ್ಯಾ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ಅಬ್ಬಾಸ್ ಕುತುಬಿ ನಗರ ಸ್ವಾಗತಿಸಿದರು. ಎಸ್ಎಂವೈಡಬ್ಲ್ಯುಎ ಜೊತೆ ಕಾರ್ಯದರ್ಶಿ ಜಮಾಲುದ್ದೀನ್ ಮಿತ್ತಡ ವಂದಿಸಿದರು
Next Story