varthabharthi


ಕರ್ನಾಟಕ

ಶಿಶುಪಾಲನಾ ಗೃಹಗಳಲ್ಲಿ ಹುಟ್ಟುಹಬ್ಬ ಆಚರಣೆಗೆ ನಿಷೇಧ

ವಾರ್ತಾ ಭಾರತಿ : 19 Oct, 2021

ಬೆಂಗಳೂರು, ಅ.19: ರಾಜ್ಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ನಡೆಸುವ ಶಿಶುಪಾಲನಾ ಗೃಹಗಳಲ್ಲಿ ನಟ-ನಟಿಯರ, ರಾಜಕಾರಣಿ ಮತ್ತು ಅಧಿಕಾರಿಗಳ ಹುಟ್ಟುಹಬ್ಬ ಆಚರಿಸದಂತೆ ಮಕ್ಕಳ ಸಂರಕ್ಷಣಾ ನಿರ್ದೇಶನಾಲಯವು ಆದೇಶ ಹೊರಡಿಸಿದೆ.

ಗಣ್ಯರು ಸೇರಿದಂತೆ ಇತರರು ತಮ್ಮ ಹುಟ್ಟುಹಬ್ಬವನ್ನು ಶಿಶುಪಾಲನಾ ಸಂಸ್ಥೆಗಳಲ್ಲಿ ಆಚರಿಸುವುದರಿಂದ, ಅಲ್ಲಿ ವಾಸಿಸುವ ಮಕ್ಕಳ ಮೇಲೆ ಪ್ರತಿಕೂಲ ಮಾನಸಿಕ ಪರಿಣಾಮ ಬೀರುವುದು. ಅಲ್ಲದೇ, ಅಲ್ಲಿ ವಾಸಿಸುವ ಬಹುಪಾಲು ಮಕ್ಕಳನ್ನು ಭಿಕ್ಷಾಟನೆ, ಲೈಂಗಿಕ ದೌರ್ಜನ್ಯ, ಪೋಷಕರ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹಗಳಂತಹ ಸನ್ನಿವೇಶಗಳಿಂದ ರಕ್ಷಿಸಲಾಗಿದ್ದು, ಇಂತಹ ಆಚರಣೆಗಳು ಅವರಲ್ಲಿ ತಪ್ಪುವ ಗ್ರಹಿಕೆಗಳನ್ನು ಮತ್ತು ದಾರಿ ತಪ್ಪಿಸುವ ಆಕಾಂಕ್ಷೆಗಳನ್ನು ಉತ್ತೇಜಿಸುತ್ತದೆ. ಆದುದರಿಂದ ಹುಟ್ಟುಹಬ್ಬ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)