ಭಾರತದ ವಿರುದ್ದ ದ್ವಿಪಕ್ಷೀಯ ಸರಣಿ ಸದ್ಯಕ್ಕಿಲ್ಲ :ರಮೀಝ್ ರಾಜ
photo:twitter/@iramizraja
ಇಸ್ಲಾಮಾಬಾದ್, ಅ. 19: ಪಾಕಿಸ್ತಾನದಲ್ಲಿ 2023ರಲ್ಲಿ ನಡೆಯಲಿರುವ ಏಶ್ಯ ಕಪ್ 50 ಓವರ್ಗಳ ಪಂದ್ಯಾವಳಿಯಾಗಿರುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಅಧ್ಯಕ್ಷ ರಮೀಝ್ ರಾಜ ಸೋಮವಾರ ಹೇಳಿದ್ದಾರೆ. ಆ ನಿರ್ದಿಷ್ಟ ವರ್ಷದ ಐಸಿಸಿ ಜಾಗತಿಕ ಪಂದ್ಯಾವಳಿಯಲ್ಲಿ ಯಾವ ಮಾದರಿಯ ಕ್ರಿಕೆಟನ್ನು ಆಡಲಾಗುತ್ತದೋ ಅದೇ ಮಾದರಿಯ ಕ್ರಿಕೆಟನ್ನು ಏಶ್ಯ ಕಪ್ನಲ್ಲೂ ಆಡುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ ಎಂದರು.
ಆದರೆ, ಸದ್ಯೋಭವಿಷ್ಯದಲ್ಲಿ ಭಾರತದ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಆಡುವ ಸಾಧ್ಯತೆ ತುಂಬಾ ವಿರಳವಾಗಿದೆ ಎಂಬ ಇಂಗಿತವನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರೂ ಆಗಿರುವ ರಮೀಝ್ ರಾಜ ವ್ಯಕ್ತಪಡಿಸಿದರು. ಉಭಯ ದೇಶಗಳ ಸಂಬಂಧ ‘‘ಹಿತಕರ ಮಟ್ಟ’’ ತಲುಪಲು ಇನ್ನೂ ಸಾಕಷ್ಟು ಪ್ರಯತ್ನಗಳು ನಡೆಯಬೇಕಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
Next Story