varthabharthi


ನಿಧನ

ಅಲಿಮಾರ್ ವಿಶ್ವನಾಥ ರೈ

ವಾರ್ತಾ ಭಾರತಿ : 23 Oct, 2021

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನ ಪ್ರಥಮ ಅಧ್ಯಕ್ಷ ಹಾಗೂ ಕೋಡಿಂಬಾಡಿ ಮಂಡಲ ಪಂಚಾಯತ್‍ನ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸುವುದರೊಂದಿಗೆ ರಾಜಕೀಯ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿ ಕೊಂಡು ಊರಿನ ಅಭಿವೃದ್ಧಿಗೆ ಶ್ರಮಿಸಿದ್ದ ಅಲಿಮಾರ್ ವಿಶ್ವನಾಥ ರೈ (91) ಕೆಲಕಾಲದ ಅನಾರೋಗ್ಯದಿಂದ ಅ.21ರಂದು ರಾತ್ರಿ ಅಲಿಮಾರ್‍ನ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಇವರು ಕೋಡಿಂಬಾಡಿ ಮಂಡಲ ಪಂಚಾಯತ್‍ಗೆ ಸದಸ್ಯರಾಗಿ ಆಯ್ಕೆಯಾಗುವುದರೊಂದಿಗೆ ರಾಜಕೀಯ ಪ್ರವೇಶ ಮಾಡಿದರಲ್ಲದೆ, ಬಳಿಕ 34 ನೆಕ್ಕಿಲಾಡಿಗೆ ಪ್ರತ್ಯೇಕ ಗ್ರಾ.ಪಂ.ಗೆ ಹೋರಾಟ ಮಾಡಿ ಅದರಲ್ಲಿ ಯಶಸ್ಸು ಸಾಧಿಸಿ ಗ್ರಾ.ಪಂ.ನ ಮೊದಲ ಅಧ್ಯಕ್ಷರಾಗಿ ಸುಮಾರು 14 ವರ್ಷಗಳ ಕಾಲ ಆಡಳಿತ ನಡೆಸಿದರು. ಈ ಸಂದರ್ಭ ನೆಕ್ಕಿಲಾಡಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಇವರು ಕಾರಣಕರ್ತರಾಗಿದ್ದರು. ಸಹಕಾರಿ ಕ್ಷೇತ್ರದಲ್ಲಿಯೂ ಸಕ್ರೀಯರಾಗಿದ್ದ ಇವರು ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಉಪ್ಪಿನಂಗಡಿ ಸಿಎ ಬ್ಯಾಂಕ್‍ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)