varthabharthi


ಕ್ರೀಡೆ

ಜೂನಿಯರ್ ನ್ಯಾಶನಲ್ ಈಜು ಚಾಂಪಿಯನ್ ಶಿಪ್ ನಲ್ಲಿ ನಟ ಮಾಧವನ್ ಪುತ್ರನಿಗೆ 7 ಪದಕ

ವಾರ್ತಾ ಭಾರತಿ : 25 Oct, 2021

photo: Quint

ಬೆಂಗಳೂರು: ನಟ ಆರ್.ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ಇತ್ತೀಚೆಗೆ ಬೆಂಗಳೂರಿನಲ್ಲಿ ಕೊನೆಗೊಂಡಿರುವ  47ನೇ ಜೂನಿಯರ್ ನ್ಯಾಷನಲ್ ಈಜು ಚಾಂಪಿಯನ್‌ಶಿಪ್ 2021 ರಲ್ಲಿ ಒಟ್ಟು ಏಳು ಪದಕಗಳನ್ನು ಗೆದ್ದಿದ್ದಾರೆ.

ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ  16ರ ಹರೆಯದ ವೇದಾಂತ್ ನಾಲ್ಕು ಬೆಳ್ಳಿ ಪದಕ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ವೇದಾಂತ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು. 800 ಮೀಟರ್ ಫ್ರೀಸ್ಟೈಲ್ ಈಜು, 1,500 ಫ್ರೀಸ್ಟೈಲ್ ಈಜು, 4×100 ಫ್ರೀಸ್ಟೈಲ್ ರಿಲೇ ಹಾಗೂ  4×200 ಫ್ರೀಸ್ಟೈಲ್ ರಿಲೇ ಸ್ಪರ್ಧೆಗಳಲ್ಲಿ ಬೆಳ್ಳಿ ಗೆದ್ದರು.

ವೇದಾಂತ್ ಅವರು 100 ಮೀಟರ್ ಫ್ರೀಸ್ಟೈಲ್ ಈಜು, 200 ಮೀಟರ್ ಫ್ರೀಸ್ಟೈಲ್ ಈಜು ಮತ್ತು 400 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡರು.

ಬಾಲಕರ ಹಾಗೂ  ಬಾಲಕಿಯರ ವಿಭಾಗಗಳಲ್ಲಿ ಎಲ್ಲ ವಯೋಮಿತಿ ಗುಂಪುಗಳಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಯಿತು. ಮಾರ್ಚ್ ನಲ್ಲಿ ವೇದಾಂತ್ ಲಾಟ್ವಿಯನ್ ಓಪನ್ ಈಜು ಚಾಂಪಿಯನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)