ನೇರಳಕಟ್ಟೆ : ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ವಿಟ್ಲ : ನೇರಳಕಟ್ಟೆ ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಸೋಮವಾರ ಶಾಲೆಯಲ್ಲಿ ನಡೆಯಿತು.
ಶಾಲಾ ಶಿಕ್ಷಕರು, ಬಿಸಿಯೂಟ ಸಿಬ್ಬಂದಿಗಳು, ಹಾಗೂ ಹಿರಿಯ ವಿದ್ಯಾರ್ಥಿಗಳು ಪುಟಾಣಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಅಬೂಬಕರ್ ಎನ್.ಕೆ, ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಪರ್ಲೊಟ್ಟು, ಅತಾವುಲ್ಲಾ ನೇರಳಕಟ್ಟೆ, ಚಂದ್ರಶೇಖರ ಪೆರಾಜೆ, ರಶೀದ್ ಪರ್ಲೊಟ್ಟು, ಮೋಹನ ಗೌಡ ಪೆರಾಜೆ, ಭಾರತಿ ಮುರುವ, ಮೋಹಿನಿ ನೇರಳಕಟ್ಟೆ, ರೇಣುಕಾ ಪರ್ಲೊಟ್ಟು, ಹೇಮಾವತಿ, ಲತಾ ನೆಕ್ಕರೆಮಠ, ಸುಮಯ್ಯ ನೇರಳಕಟ್ಟೆ, ಸಫಿಯ ನೇರಳಕಟ್ಟೆ, ನೆಬಿಸ ಕೋಚಪಲ್ಕೆ, ಉದ್ಯಮಿ ದರ್ಬಾರ್ ಅಬ್ದುಲ್ ಖಾದರ್ ಪರ್ಲೊಟ್ಟು, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸಹ ಶಿಕ್ಷಕರಾದ ಗೀತಾ, ಲೀಲಾವತಿ, ಸೇಸಪ್ಪ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ, ಪೆನ್ಸಿಲ್, ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.