varthabharthi


ರಾಷ್ಟ್ರೀಯ

ಎನ್ ಸಿಬಿಯ ಸಮೀರ್ ವಾಂಖೆಡೆ ನಕಲಿ ದಾಖಲೆ ಬಳಸಿದ್ದಾರೆ: ಸಚಿವ ನವಾಬ್ ಮಲಿಕ್ ಆರೋಪ

ವಾರ್ತಾ ಭಾರತಿ : 25 Oct, 2021

 ಮುಂಬೈ, ಅ. 25: ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಜನನ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಮಹಾರಾಷ್ಟ್ರದ ಎನ್‌ಸಿಪಿ ಸಚಿವ ನವಾಬ್ ಮಲಿಕ್ ಅವರು ಸೋಮವಾರ ಆರೋಪಿಸಿದ್ದಾರೆ.

 ಉದ್ದೇಶಿತ ಪ್ರಮಾಣ ಪತ್ರದ ಫೋಟೊ ಟ್ವೀಟ್ ಮಾಡಿರುವ ಮಲ್ಲಿಕ್ ಅವರು, ಸಮೀರ್ ದಾವೂದ್ ವಾಂಖೆಡೆ ಅವರ ದಾಖಲೆಗಳ ನಕಲಿ ಮಾಡುವುದು ಇಲ್ಲಿಂದ ಆರಂಭವಾಗಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಾಂಖೆಡೆ, ಸಚಿವರ ವೈಯುಕ್ತಿಕ ಮಾನ ಹಾನಿಕರ ಹಾಗೂ ನಿಂದನೆಯ ವಾಗ್ದಾಳಿಯು ತನಗೆ ನೋವು ಉಂಟು ಮಾಡಿದೆ ಎಂದಿದ್ದಾರೆ.

 ‘‘ಕಳೆದ ಕೆಲವು ದಿನಗಳ ಸಚಿವರ ವರ್ತನೆ ನನಗೆ ಹಾಗೂ ನನ್ನ ಕುಟುಂಬಕ್ಕೆ ಮಾನಸಿಕ ಹಾಗೂ ಭಾವನಾತ್ಮಕ ಒತ್ತಡ ಉಂಟು ಮಾಡಿದೆ’’ ಎಂದು ವಾಂಖೆಡೆ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)