varthabharthi


ಬೆಂಗಳೂರು

ಕರ್ಣಾಟಕ ಬ್ಯಾಂಕಿಗೆ 'ಏಶಿಯಾ ಪೆಸಿಫಿಕ್ ಎಚ್.ಆರ್.ಎಂ ಕಾಂಗ್ರೆಸ್' ಸಂಸ್ಥೆಯಿಂದ ಪ್ರಶಸ್ತಿ

ವಾರ್ತಾ ಭಾರತಿ : 28 Oct, 2021

ಬೆಂಗಳೂರು : 'ಏಶಿಯಾ ಪೆಸಿಫಿಕ್ ಎಚ್.ಆರ್.ಎಂ ಕಾಂಗ್ರೆಸ್ ಸಂಸ್ಥೆ'ಯು ತನ್ನ 19ನೇ ಆವೃತ್ತಿಯಲ್ಲಿ ಕರ್ಣಾಟಕ ಬ್ಯಾಂಕಿಗೆ "ಟಾಪ್ ಆರ್ಗನೈಸೇಶನ್ ವಿತ್ ಇನ್ನೊವೇಟಿವ್ ಎಚ್‍ಆರ್ ಪ್ರಾಕ್ಟೀಸಸ್ (Top Organisations with innovative HR practices)" ಪ್ರಶಸ್ತಿ ಪ್ರದಾನ ಮಾಡಿದೆ.

ಮಾನವ ಸಂಪನ್ಮೂಲದ ಉತ್ತಮ ನಿರ್ವಹಣೆಗಾಗಿ ಕರ್ಣಾಟಕ ಬ್ಯಾಂಕ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ಮಹಾಲಿಂಗೇಶ್ವರ.ಕೆ ಪ್ರಶಸ್ತಿಯನ್ನು ಬ್ಯಾಂಕಿನ ಪರವಾಗಿ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.

ಬ್ಯಾಂಕಿಗೆ ಪ್ರಶಸ್ತಿ ಸಂದ ಈ ಸಂದರ್ಭದಲ್ಲಿ ಹರ್ಷವ್ಯಕ್ತಪಡಿಸಿ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸೆಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್ ಅವರು "ಇದು ಕರ್ಣಾಟಕ ಬ್ಯಾಂಕಿನ ದಕ್ಷ ಸಿಬ್ಬಂದಿಗಳಿಗೆ ಸಂದ ಗೌರವವಾಗಿದೆ. ಬ್ಯಾಂಕ್ ಮಾನವ ಸಂಪನ್ಮೂಲದ ಉತ್ತಮ ನಿರ್ವಹಣೆಗಾಗಿ ಅನೇಕ ಉಪಕ್ರಮಗಳನ್ನು ಅನುಸರಿಸುತ್ತಿದೆ. ಸಿಬ್ಬಂದಿಗಳ ಬ್ಯಾಂಕಿಂಗ್ ಜ್ಞಾನವನ್ನು ಮತ್ತಷ್ಟು ವೃದ್ಧಿಸುವ ಸಲುವಾಗಿ ಇ-ಲರ್ನಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ತನ್ಮೂಲಕ ನಮ್ಮ ಸಿಬ್ಬಂದಿಗಳು ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದ್ದಾರೆ. ಈ ಪ್ರಶಸ್ತಿಯು 8,400 ಕ್ಕೂ ಮಿಕ್ಕಿ ಇರುವ ನಮ್ಮ ಸಂಸ್ಥೆಯ ಸಿಬ್ಬಂದಿಗಳ ಶ್ರಮ ಹಾಗೂ ಅವರ ಸೇವೆಗೆ ಸಿಕ್ಕ ಪ್ರತಿಫಲವಾಗಿದೆ. ಕರ್ಣಾಟಕ ಬ್ಯಾಂಕ್ ‘ಭವಿಷ್ಯದ ಡಿಜಿಟಲ್ ಬ್ಯಾಂಕ್’ ಆಗಿ ಹೊರಹೊಮ್ಮುವಲ್ಲಿ ನಮ್ಮ ಸಿಬ್ಬಂದಿಗಳ ಅವಿರತ ಶ್ರಮ ಹಾಗೂ ಶ್ರದ್ಧೆಗೆ ಈ ಪ್ರಶಸ್ತಿಯು ಇನ್ನಷ್ಟು ಉತ್ತೇಜನವನ್ನು ನೀಡಲಿದೆ" ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)