varthabharthi


ನಿಮ್ಮ ಅಂಕಣ

ಕನ್ನಡ ಕಡ್ಡಾಯ ಎಷ್ಟು ಸರಿ?

ವಾರ್ತಾ ಭಾರತಿ : 29 Oct, 2021
-ಜೋಸ್ಲಿನ್ ಗಾಮ, ಚಿಕ್ಕಮಗಳೂರು

 ಮಾನ್ಯರೇ,

ರಾಜ್ಯ ಸರಕಾರವು ನೂತನ ಶಿಕ್ಷಣ ನೀತಿಯ ಜಾರಿಯ ಸಂದರ್ಭದಲ್ಲಿ ಎಲ್ಲಾ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕೆಂದು ಆದೇಶ ಹೊರಡಿಸಿತ್ತು. ಆದರೆ, ಇದೇ ಮಂಗಳವಾರದಂದು ಉಚ್ಚನ್ಯಾಯಾಲಯವು ಈ ಆದೇಶವನ್ನು ಮರುಪರಿಶೀಲಿಸಬೇಕೆಂದು ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ. ಈ ಆದೇಶದಿಂದ ಪ್ರಮುಖವಾಗಿ ಬೇರೆ ಬೇರೆ ರಾಷ್ಟ್ರ ಹಾಗೂ ರಾಜ್ಯಗಳಿಂದ ತಮ್ಮ ಉನ್ನತ ಶಿಕ್ಷಣವನ್ನು ಪಡೆಯಲು ಬಂದಿರುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ.

ಮೊತ್ತ ಮೊದಲಿಗೆ ಯಾವ ಭಾಷೆಯನ್ನು ಕಲಿಯಬೇಕು ಎಂಬುದು ವಿದ್ಯಾರ್ಥಿಗಳ ಆಯ್ಕೆ. ಪದವಿ ಶಿಕ್ಷಣದ ಮೊದಲು ಕನ್ನಡ ಕಲಿಯದೆ ಇರುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತದೆ. ನಮ್ಮ ರಾಜ್ಯದಲ್ಲಿ ವಿದ್ಯಾಭ್ಯಾಸಕ್ಕೆಂದು ಆಗಮಿಸಿದವರಿಗೆ, ಭವಿಷ್ಯದಲ್ಲಿ ಬೇರೆ ಬೇರೆ ರಾಜ್ಯಗಳನ್ನು ಅಥವಾ ರಾಷ್ಟ್ರಗಳನ್ನು ಆದರಿಸಿ ಹೋಗುವವರಿಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಹೇಳುವುದು ಎಷ್ಟು ಸರಿ?. ಇಲ್ಲಿ ತೊಂದರೆಗೆ ಈಡಾಗುವವರು ವಿದ್ಯಾರ್ಥಿಗಳು ಮಾತ್ರವಲ್ಲ, ಬೇರೆ ಬೇರೆ ಭಾಷಾ ಅಧ್ಯಾಪಕರು ಕೂಡ. ಈ ಆದೇಶವನ್ನು ರಾಜ್ಯ ಸರಕಾರವು ಕೂಡಲೇ ಮರುಪರಿಶೀಲಿಸಿ ಸೂಕ್ತ ನಿಲುವು ತೆಗೆದುಕೊಳ್ಳಬೇಕಾಗಿದೆೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)