ಬಿ.ವೆಂಕಟೇಶ್ ಪೈ
ಗಂಗೊಳ್ಳಿ, ಅ.29: ದಿವಂಗತ ಬಾಂಡ್ಯ ಅಣ್ಣಪ್ಪಪೈ ಅವರ ಪುತ್ರ, ಗಂಗೊಳ್ಳಿಯ ನಿವಾಸಿ ಬಿ.ವೆಂಕಟೇಶ್ ಪೈ(82) ಅಲ್ಪಕಾಲದ ಅಸೌಖ್ಯದಿಂದ ಅ.28ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಗಂಗೊಳ್ಳಿಯಲ್ಲಿ ನವ ಭಾರತ, ಮುಂಗಾರು, ಹೊಸದಿಗಂತ, ವಿಜಯ ಕರ್ನಾಟಕ ಸಹಿತ ಇನ್ನಿತರ ಹಲವು ಪತ್ರಿಕೆಗಳ ವಿತರಕರಾಗಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇದರೊಂದಿಗೆ ಗಂಗೊಳ್ಳಿಯ ಅಂಚೆ ಕಚೇರಿ ಯಲ್ಲಿ ಅನೇಕ ವರ್ಷಗಳ ಕಾಲ ಟೆಲಿಗ್ರಾಂ ಎಕ್ಸ್ಚೇಂಜರ್ ಆಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ರಕರ್ತ ರಾಘವೇಂದ್ರ ಪೈ ಸಹಿತ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
Next Story