ಝಲಕ್
ಬೆಳಕು
ವಾರ್ತಾ ಭಾರತಿ : 5 Nov, 2021
ಮಗು

ಹುಟ್ಟು ಕುರುಡು ಮಗುವೊಂದು ದೀಪಾವಳಿಯ ದಿನ ಮನೆಯ ಮುಂದೆ ಕೂತಿತ್ತು. ಅದು ತಾಯಿಯ ಬಳಿ ಕೇಳಿತು ''ಅಮ್ಮ ಬೆಳಕು ದೊಡ್ಡದಾಗಿ ಸದ್ದು ಮಾಡುವುದು ಯಾಕೆ?''
''ಬೆಳಕು ಸದ್ದು ಮಾಡುವುದಿಲ್ಲ ಮಗು...''
''ಪಟಾಕಿ ಹಚ್ಚಿದಾಗ ಬೆಳಕಾಗುವುದಿಲ್ಲವೆ?''
''ಪಟಾಕಿ ಬೆಳಗುವುದಿಲ್ಲ. ಸದ್ದು ಮಾಡುವವರು ಯಾವತ್ತೂ ಬೆಳಕಾಗುವುದಿಲ್ಲ....ಬಾ ದೀಪ ಹಚ್ಚು''
ಮಗು ದೀಪ ಹಚ್ಚಿತು. ''ಆದರೆ ನನಗೆ ಬೆಳಕು ಕಾಣುತ್ತಿಲ್ಲವಲ್ಲ....'' ಮಗು ಕೇಳಿತು.
''ಆದರೆ ಈ ಬೆಳಕಿನಲ್ಲಿ ನೀನು ಎಲ್ಲರಿಗೂ ಕಾಣುತ್ತಿರುವೆ'' ತಾಯಿ ತಲೆ ಸವರಿ ಹೇಳಿದಳು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)