varthabharthi


ಸಿನಿಮಾ

ಅಮಿತಾಭ್ ಮೊಮ್ಮಗ, ಶಾರುಕ್ ಹಾಗೂ ಶ್ರೀದೇವಿ ಪುತ್ರಿಯರ ಹೊಸ ಸಿನಿಮಾ !

ವಾರ್ತಾ ಭಾರತಿ : 11 Nov, 2021

Photo: Instagram/amitabhbachchan

ಮುಂಬೈ: ಝೋಯಾ ಅಖ್ತರ್ ಅವರ ಆರ್ಚೀಸ್ ಕಾಮಿಕ್ಸ್ ಆಧರಿತ ಬಾಲಿವುಡ್ ಸಿನೆಮಾದಲ್ಲಿ ಹಿರಿಯ ನಟ ಅಮಿತಾಬ್  ಬಚ್ಚನ್ ಅವರ 20 ರ ಹರೆಯದ ಮೊಮ್ಮಗ ಅಗಸ್ತ್ಯ ಬಚ್ಚನ್ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಗಸ್ತ್ಯ ಅಮಿತಾಭ್ ಅವರ ಪುತ್ರಿ ಶ್ವೇತಾರ ಪುತ್ರನಾಗಿದ್ದಾನೆ. 

ಝೋಯಾ ಅಖ್ತರ್ ಅವರ ಈ ಚಿತ್ರವು  ಹೆಚ್ಚು ಬೇಡಿಕೆಯಿರುವ ಸ್ಟಾರ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಾಗೂ ದಿವಂಗತ ನಟಿ  ಶ್ರೀದೇವಿ ಅವರ ಪುತ್ರಿ ಖುಷಿಯವರನ್ನು ಕೂಡ ಪರಿಚಯಿಸುತ್ತದೆ ಎಂದು ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ ಸುಹಾನಾ ಬಾಲಿವುಡ್ ಬೆಟ್ಟಿ ಪಾತ್ರದಲ್ಲಿ ನಟಿಸಲಿದ್ದು, ಖುಷಿ, ವೆರೋನಿಕಾ ಅವರ ಸ್ಟೈಲ್ಟೊಸ್ ಗೆ ಹೊಂದಿಕೊಳ್ಳಲಿದ್ದಾರೆ. ಆದರೆ ಕಾಮಿಕ್ಸ್ ನ ದೇಸಿ ಅವತಾರದಲ್ಲಿ ಆರ್ಚೀ ಪಾತ್ರವನ್ನು ಅಗಸ್ತ್ಯ ಬಚ್ಚನ್ ನಿರ್ವಹಿಸುತ್ತಾರೆ, ಅಗಸ್ತ್ಯ ಅವರ ಬಾಲಿವುಡ್ ಚೊಚ್ಚಲ ಪರಿಚಯದ ಕುರಿತು  ಸುಮಾರು ಎರಡು ವರ್ಷಗಳಿಂದ ಚರ್ಚೆ ನಡೆಯುತ್ತಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)