varthabharthi


ಗಲ್ಫ್ ಸುದ್ದಿ

ದುಬೈ, ಶಾರ್ಜಾದಲ್ಲಿ ಲಘು ಭೂಕಂಪನದ ಅನುಭವ

ವಾರ್ತಾ ಭಾರತಿ : 14 Nov, 2021

ದುಬೈ:ದುಬೈ ಹಾಗೂ  ಶಾರ್ಜಾದ ಹಲವಾರು ನಿವಾಸಿಗಳು ರವಿವಾರ ಸಂಜೆ ಲಘು ಭೂಕಂಪನದ  ಅನುಭವ ಹಂಚಿಕೊಂಡಿದ್ದಾರೆ Khaleej Times  ವರದಿ ಮಾಡಿದೆ

ಇರಾನ್‌ನ ದಕ್ಷಿಣದಲ್ಲಿ ಸಂಜೆ 4.07ಕ್ಕೆ ಅಪ್ಪಳಿಸಿದ 6.2 ತೀವ್ರತೆಯ ಭೂಕಂಪದಿಂದ ಈ ಕಂಪನಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್ ಸಿಎಂ) ದೃಢಪಡಿಸಿದೆ.

ಎನ್ ಸಿಎಂ ಪ್ರಕಾರ, ಇದು "ಯಾವುದೇ ಪರಿಣಾಮವಿಲ್ಲದೆ" ದೇಶದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಸ್ವಲ್ಪ ಪ್ರಭಾವ ಬೀರಿದೆ.

ಯುಎಇ ಒಂದು ವರ್ಷದಲ್ಲಿ ಹಲವಾರು ಬಾರಿ ಸಣ್ಣ ಭೂಕಂಪಗಳನ್ನು ಅನುಭವಿಸುತ್ತದೆ ಹಾಗೂ  ಅವು ಆತಂಕಕ್ಕೆ ಕಾರಣವಾಗದು ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್‌ಸಿಎಂ) ಈ ಹಿಂದೆ Khaleej Times  ಗೆ ತಿಳಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)