varthabharthi


ಅಂತಾರಾಷ್ಟ್ರೀಯ

​ಬಾಹ್ಯಾಕಾಶ ಯಾನಕ್ಕೆ ಲಾಟರಿಯಲ್ಲಿ ಟಿಕೆಟ್ ಗೆದ್ದ ತಾಯಿ- ಮಗಳು !

ವಾರ್ತಾ ಭಾರತಿ : 25 Nov, 2021

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಆಂಟಿಗುವಾ ಮತ್ತು ಬಾರ್ಬುಡಾದ ಆರೋಗ್ಯ ತರಬೇತುಗಾರ್ತಿ ಕೀಶಾ ಶ್ಚಹಾಫ್ (44) ಎಂಬ ಮಹಿಳೆ ವರ್ಜಿನ್ ಗ್ಯಾಲಾಕ್ಟಿಕ್ಸ್‌ನ ಮೊದಲ ಬಾಹ್ಯಾಕಾಶ ಪ್ರವಾಸಿಯಾಗಿ ತೆರಳಲು ಸುಮಾರು 10 ಲಕ್ಷ ಡಾಲರ್ ಮೌಲ್ಯದ ಟಿಕೆಟ್ ಗೆದ್ದಿದ್ದಾರೆ ಎಂದು ಕಂಪನಿ ಪ್ರಕಟಿಸಿದೆ.

ಭೂ ಕಕ್ಷೆಗೆ ತಮ್ಮ 17 ವರ್ಷದ ಮಗಳ ಜತೆ ಬಾಹ್ಯಾಕಾಶ ಯಾನ ಕೈಗೊಳ್ಳುವುದಾಗಿ ಕೀಶಾ ಹೇಳಿದ್ದಾರೆ. 17 ವರ್ಷ ವಯಸ್ಸಿನ ಮಗಳು ಬ್ರಿಟನ್‌ನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದು, ನಾಸಾದಲ್ಲಿ ಉದ್ಯೋಗ ಪಡೆಯುವ ಕನಸು ಹೊಂದಿದ್ದಾರೆ.

ವರ್ಜಿನ್ ಗ್ಯಾಲಾಕ್ಟಿಕ್ ಸಂಸ್ಥಾಪಕ ರಿಚರ್ಡ್ ಬ್ರಾಸನ್ ಅವರು ಆಂಟಿಗುವಾ ಮತ್ತು ಬಾರ್ಬುಡಾದಲ್ಲಿರುವ ಕೀಶಾ ಮನೆಗೆ ತೆರಳಿ ಸ್ವತಃ ಸುದ್ದಿ ತಲುಪಿಸುವ ಮೂಲಕ ಅಚ್ಚರಿ ಮೂಡಿಸಿದರು. "ನನಗೆ ಝೂಮ್ ಸಂದರ್ಶನ ಮಾಡಲಾಗುತ್ತಿದೆ ಎಂದು ನಾನು ಭಾವಿಸಿದೆ" ಎಂದು ಕೀಶಾ ಪ್ರತಿಕ್ರಿಯಿಸಿದ್ದಾರೆ. "ರಿಚರ್ಡ್ ಬ್ರಾಸನ್ ನಡೆದುಕೊಂಡು ಬರುತ್ತಿರುವುದನ್ನು ನಾನು ನೋಡಿದಾಗ, ನಾನು ಚೀರಿಕೊಂಡೆ; ಇದನ್ನು ನಂಬಲು ಸಾಧ್ಯವಾಗಲಿಲ್ಲ"

"ಪುಟ್ಟ ಹುಡುಗಿಯಾಗಿದಾಗಲೇ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೊಂದಿದ್ದೆ. ಇದು ನನಗೆ ಜೀವಂತವಾಗಿರುವ ಭಾವನೆ ಹೊಂದಲು ಮತ್ತು ನನ್ನ ಸರ್ವಶ್ರೇಷ್ಠ ಸಾಹಸಕ್ಕೆ ದೊರಕಿದ ಅತ್ಯದ್ಭುತ ಅವಕಾಶ" ಎಂದು ಬಣ್ಣಿಸಿದರು.

ವರ್ಜಿನ್ ಗ್ಯಾಲಕ್ಟಿಕ್, ಒಮೇರ್ ಪ್ಲಾಟ್‌ ಫೋರಂನಲ್ಲಿ ನಡೆಸಿದ ನಿಧಿ ಸಂಗ್ರಹ ಲಾಟರಿಯಲ್ಲಿ ಕೀಶಾ ಬಹುಮಾನ ಗೆದ್ದರು. 17 ಲಕ್ಷ ಡಾಲರ್ ನಿಧಿಯನ್ನು ಈ ಪ್ಲಾಟ್‌ ಫೋರಂನಲ್ಲಿ ಸಂಗ್ರಹಿಸಲಾಗಿದೆ. ಈ ಹಣವನ್ನು ಬಾಹ್ಯಾಕಾಶದ ವಿಸ್ತೃತ ಲಭ್ಯತೆಯ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಯಾದ ಸ್ಪೇಸ್ ಫಾರ್ ಹ್ಯುಮಾನಿಟಿಗೆ ದೇಣಿಗೆಯಾಗಿ ನೀಡಲಾಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)