varthabharthi


ಕ್ರೀಡೆ

ಮೊದಲ ಟೆಸ್ಟ್: ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಶ್ರೇಯಸ್ ಅಯ್ಯರ್

ವಾರ್ತಾ ಭಾರತಿ : 25 Nov, 2021

ಕಾನ್ಪುರ: ಮೊದಲ ಪಂದ್ಯದಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿದ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜರ ನೆರವಿನಿಂದ ಭಾರತವು ನ್ಯೂಝಿಲ್ಯಾಂಡ್ ವಿರುದ್ಧ ಗುರುವಾರ ಆರಂಭವಾಗಿರುವ ಮೊದಲ ಟೆಸ್ಟ್ ನ ಮೊದಲ ದಿನದ ಟೀ ವಿರಾಮದ ಬಳಿಕ 200ರ ಗಡಿ ದಾಟಿದೆ.

ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರು  ಕೈಲ್ ಜಮೀಸನ್ ಅವರ ಮೂರನೇ ಬಲಿಯಾದ ಬಳಿಕ ಭಾರತಕ್ಕೆ ಅಯ್ಯರ್ ಹಾಗೂ ಜಡೇಜ ಆಸರೆಯಾದರು.  

ಜಡೇಜ ಹಾಗೂ ಅಯ್ಯರ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು ಭಾರತದ ಮೊತ್ತವನ್ನು 200ರ ಗಡಿ ದಾಟಿಸಿ, ತಂಡವನ್ನು ಸಮಸ್ಯೆಯಿಂದ ಪಾರು ಮಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)