ಇಂಡೋನೇಶ್ಯ ಓಪನ್: ಸಿಂಧು ಸೆಮಿಫೆನಲ್ಗೆ
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್-ಚಿರಾಗ್ ಸೆಮಿಗೆ
ಬಾಲಿ (ಇಂಡೋನೇಶ್ಯ), ನ. 26: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಭಾರತದ ಪಿ.ವಿ. ಸಿಂಧು ಶುಕ್ರವಾರ ಇಂಡೋನೇಶ್ಯ ಓಪನ್ ಸೂಪರ್ 1000 ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಬಾಲಿಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಕ್ವಾರ್ಟರ್ಫೈನಲ್ನಲ್ಲಿ ಸಿಂಧು ದಕ್ಷಿಣ ಕೊರಿಯದ ಸಿಮ್ ಯುಜಿನ್ರನ್ನು 14-21, 21-19, 21-14 ಗೇಮ್ಗಳಿಂದ ಸೋಲಿಸಿದರು.
ಆರಂಭದಲ್ಲಿ ಒಂದು ಗೇಮ್ನ ಹಿನ್ನಡೆ ಕಂಡರೂ ಬಳಿಕ ತೀವ್ರ ಪ್ರತಿ ಹೋರಾಟ ನೀಡಿದ ಸಿಂಧು ಉಳಿದ ಎರಡೂ ಗೇಮ್ಗಳನ್ನು ಗೆದ್ದು ವಿಜಯಗ ನಗೆ ಬೀರಿದರು. ಪಂದ್ಯವು ಒಂದು ಗಂಟೆ ಆರು ನಿಮಿಷಗಳ ಕಾಲ ಸಾಗಿತು.
ಶುಕ್ರವಾರ ನಡೆದ ಪುರುಷರ ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಲೇಶ್ಯದ ಗೋಹ್ ಝೇ ಫೈ ಮತ್ತು ನೂರ್ ಇಝುದ್ದೀನ್ ಜೋಡಿಯನ್ನು 21-19, 21-19 ಗೇಮ್ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದರು.
ಗುರುವಾರ ನಡೆದ ಪುರುಷರ ಸಿಂಗಲ್ಸ್ನಲ್ಲಿ 16ನೇ ವಿಶ್ವ ರ್ಯಾಂಕಿಂಗ್ನ ಬಿ. ಸಾಯಿ ಪ್ರಣೀತ್ ಫ್ರಾನ್ಸ್ನ ಕ್ರಿಸ್ಟೊ ಪೊಪೊವ್ರನ್ನು 21-17, 14-21, 21-11 ಗೇಮ್ಗಳಿಂದ ಸೋಲಿಸಿ ಕ್ವಾರ್ಟರ್ಪೈನಲ್ ತಲುಪಿದ್ದಾರೆ.