varthabharthi


ನಿಮ್ಮ ಅಂಕಣ

ಇದು ಆತಂಕಕಾರಿ ಬೆಳವಣಿಗೆ..!

ವಾರ್ತಾ ಭಾರತಿ : 28 Nov, 2021
ನಿಝಾರ್ ಚೆನ್ನಾರ್, ಪುತ್ತೂರು

ಮಾನ್ಯರೇ,

 ದ.ಕ. ಜಿಲ್ಲೆಯ ಪುತ್ತೂರಿನ ಕಾಲೇಜೊಂದರಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ತ್ರಿಶೂಲದಿಂದ ಹಲ್ಲೆಗೈದಿರುವ ಆತಂಕಕಾರಿ ಘಟನೆ ನಿಜಕ್ಕೂ ಖಂಡನೀಯ. ನೈತಿಕತೆಯನ್ನು ಸಾರಬೇಕಾದ ಕ್ಯಾಂಪಸ್‌ಗಳಲ್ಲಿ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ವಿದ್ಯಾರ್ಜನೆಗಾಗಿ ಬರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ ಅವರ ನಡುವೆ ಕಂದಕವನ್ನು ಸೃಷ್ಟಿಸಿ ಅನೈತಿಕತೆಗೆ ದಾರಿ ಒದಗಿಸುವ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ. ಪೆನ್ನು ಪುಸ್ತಕ ಹಿಡಿಯಬೇಕಾದ ವಿದ್ಯಾರ್ಥಿಗಳ ಕೈಗಳಿಗೆ ಆಯುಧಗಳನ್ನು, ಪ್ರಚೋದನಾಕಾರಿ ಸಂದೇಶಗಳು, ಹೇಳಿಕೆಗಳನ್ನ್ನು ನೀಡುವ ಪ್ರಸ್ತುತ ಸನ್ನಿವೇಶದಲ್ಲಿ ಕಾನೂನು ಬಾಹಿರ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಕರಾವಳಿಯ ಪರಿಸ್ಥಿತಿಯು ಇನ್ನಷ್ಟು ಬಿಗಡಾಯಿಸಿ ಇಲ್ಲಿನ ಕೋಮು ಸೌಹಾರ್ದತೆ ಅಶಾಂತಿಯ ತೋಟವಾಗುವ ಸಾಧ್ಯತೆಯಿದೆ. ಅಪರಾಧಿಗಳನ್ನೂ ಕೃತ್ಯವೆಸಗಲು ಅದಕ್ಕೆ ಕುಮ್ಮಕ್ಕು ನೀಡಿದವರನ್ನೂ ಕಾನೂನಿನ ಕುಣಿಕೆಯ ಮುಂದೆ ತರಬೇಕಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)