varthabharthi


ಕ್ರೀಡೆ

ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ಸ್ 2021: 49 ಕೆಜಿ ವಿಭಾಗದಲ್ಲಿ ಪರಮ್‌ಜೀತ್‌ಗೆ ಕಂಚಿನ ಪದಕ

ವಾರ್ತಾ ಭಾರತಿ : 29 Nov, 2021

ಪರಮ್‌ಜೀತ್‌

ಟಿಬಿಲಿಸಿ (ಜಾರ್ಜಿಯ), ನ. 28: ಜಾರ್ಜಿಯದ ಟಿಬಿಲಿಸಿಯಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ಸ್ 2021ರಲ್ಲಿ ರವಿವಾರ ಭಾರತದ ಪ್ಯಾರಾ ಪವರ್‌ಲಿಫ್ಟರ್ ಪರಮ್‌ಜೀತ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. 49 ಕೆಜಿ ದೇಹತೂಕ ವಿಭಾಗದಲ್ಲಿ ಸ್ಪರ್ಧಿಸಿರುವ ಕುಮಾರ್ ಒಟ್ಟು 158 ಕೆಜಿ ಎತ್ತಿದರು.

ಈಜಿಪ್ಟ್‌ನ ಉಮರ್ ಶಮಿ 174 ಕೆಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದರೆ, ವಿಯೆಟ್ನಾಮ್‌ನ ವಾನ್ ಕಾಂಗ್ ಲೆ 170 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು.

ಲುದಿಯಾನದ ಹರಿಪುರ್ ಖಾಲ್ಸ ಗ್ರಾಮದ ನಿವಾಸಿಯಾಗಿರುವ ಅವರು 2018ರ ಅಕ್ಟೋಬರ್‌ನಲ್ಲಿ ಜಕಾರ್ತದಲ್ಲಿ ನಡೆದ ಏಶ್ಯನ್ ಪ್ಯಾರಾ ಗೇಮ್ಸ್ ನಲ್ಲೂ ಕಂಚಿನ ಪದಕವನ್ನು ಗೆದ್ದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)