varthabharthi


ಕ್ರೀಡೆ

ಬೈಕ್ ಅಪಘಾತದಲ್ಲಿ ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಗೆ ಗಾಯ

ವಾರ್ತಾ ಭಾರತಿ : 29 Nov, 2021

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಮೋಟಾರ್ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ.

 ಮಗ ಜಾಕ್ಸನ್‌ನೊಂದಿಗೆ ವಾರ್ನ್ ತನ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕೆಳಗೆ ಬಿದ್ದರು. 15 ಮೀಟರ್‌ಗೂ ಹೆಚ್ಚು ದೂರ ಹೋಗಿ ಬಿದ್ದಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ನ್ಯೂಸ್ ಕಾರ್ಪ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ.

 "ನಾನು ಸ್ವಲ್ಪ ಜರ್ಜರಿತನಾಗಿದ್ದೇನೆ ಹಾಗೂ  ಮೂಗಿಗೆ ಏಟು ಬಿದ್ದಿದೆ. ತುಂಬಾ ನೋಯುತ್ತಿದೆ’’ ಎಂದು ಅಪಘಾತದ ನಂತರ ವಾರ್ನ್ ಹೇಳಿದ್ದಾರೆ.

ವಾರ್ನ್ ಗಂಭೀರವಾದ ಗಾಯದಿಂದ ಪಾರಾಗಿದ್ದಾರೆ ಆದರೆ ಮರುದಿನ ಬೆಳಿಗ್ಗೆ ಏಳುವಾಗ ನೋವು ಕಾಣಿಸಿಕೊಂಡಿದೆ.

52 ವರ್ಷ ವಯಸ್ಸಿನ ವಾರ್ನ್ ಅವರು ತಮ್ಮ ಕಾಲು ಮುರಿದಿರಬಹುದು ಅಥವಾ ಸೊಂಟಕ್ಕೆ ಹಾನಿಯಾಗಿರಬಹುದೆಂಬ ಭಯದಿಂದ ಆಸ್ಪತ್ರೆಗೆ ಹೋಗಿದ್ದರು.

ಆದಾಗ್ಯೂ, ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್  ಮುಂಬರುವ ಆ್ಶಶಸ್‌ ಸರಣಿಯಲ್ಲಿ ಟಿವಿ ಕೆಲಸಗಳನ್ನು ಮಾಡುವ ನಿರೀಕ್ಷೆಯಿದೆ. ಸರಣಿಯು ಡಿಸೆಂಬರ್ 8 ರಿಂದ ಪರ್ತ್ ನ ಗಾಬಾ ಸ್ಟೇಡಿಯಂನಲ್ಲಿ ಆರಂಭವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)