ಟ್ವಿಟರ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜಾಕ್ ಡೋರ್ಸಿ ರಾಜೀನಾಮೆ
ಹೊಸ ಸಿಇಒ ಆಗಿ ಭಾರತೀಯ-ಅಮೆರಿಕನ್ ಪರಾಗ್ ಅಗರವಾಲ್ ನೇಮಕ
ಜ್ಯಾಕ್ ಡಾರ್ಸೆ(Photo: PTI) / ಪರಾಗ್ ಅಗರವಾಲ್ (Photo: Twitter)
ನ್ಯೂಯಾರ್ಕ್, ನ.29: ಟ್ವಿಟರ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜಾಕ್ ಡೋರ್ಸಿ ರಾಜೀನಾಮೆ ನೀಡಿದ್ದಾರೆ. 45ರ ಹರೆಯದ ಡೋರ್ಸಿ ಟ್ವೀಟ್ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದರು.
ಟ್ವಿಟರ್ನ ಮುಖ್ಯ ತಂತ್ರಜ್ಞಾನ ಅಧಿಕಾರಿ, ಭಾರತೀಯ-ಅಮೆರಿಕನ್ ಪರಾಗ್ ಅಗರವಾಲ್ ಅವರು ಜಾಕ್ ಡೋರ್ಸಿ ಉತ್ತರಾಧಿಕಾರಿಯಾಗಲಿದ್ದಾರೆ.
ಅಗರವಾಲ್ ಐಐಟಿ-ಬಾಂಬೆ ಹಳೆ ವಿದ್ಯಾರ್ಥಿಯಾಗಿದ್ದು, ಅವರು ಸ್ಟಾನ್ಫೋರ್ಡ್ನಲ್ಲಿ ಅಧ್ಯಯನ ಮಾಡಲು ಹೋಗಿದ್ದರು. ಅವರು 2011ರಲ್ಲಿ ಟ್ವಟರ್ಗೆ ಸೇರುವ ಮೊದಲು ಮೈಕ್ರೊಸಾಫ್ಟ್ ಯಾಹೂ! ಹಾಗೂ ಎಟಿ&ಎಟಿ ಯಲ್ಲಿ ಕಾರ್ಯನಿರ್ವಹಿಸಿದ್ದರು.
not sure anyone has heard but,
— jack⚡️ (@jack) November 29, 2021
I resigned from Twitter pic.twitter.com/G5tUkSSxkl
Next Story