varthabharthi


ನಿಮ್ಮ ಅಂಕಣ

​ಮಾನವೀಯತೆಯನ್ನು ಅರಿಯದವರು

ವಾರ್ತಾ ಭಾರತಿ : 29 Nov, 2021
-ನಿರ್ಮಲ ದೇವಾಡಿಗ, ಮುರ್ಡೇಶ್ವರ

ಮಾನ್ಯರೇ,

ಉತ್ತರಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ದಲಿತ ಕುಟುಂಬದ ನಾಲ್ಕು ಸದಸ್ಯರನ್ನು ಹತ್ಯೆ ಮಾಡಲಾಗಿದ್ದು, ಅದೇ ಕುಟುಂಬದ 14 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ದಲಿತರು ಕೂಡ ಮನುಷ್ಯರೇ, ಮಹಿಳೆಗೂ ಜೀವವಿದೆ ಎನ್ನುವುದನ್ನು ಅರ್ಥ ಮಾಡಿಸಲು ಕಾನೂನು, ಕಠಿಣ ಶಿಕ್ಷೆ ಬೇಕು ಎಂಬುವುದನ್ನು ಅರಿತುಕೊಳ್ಳಲು ಈ ಮನುಕುಲ ಮೊದಲು ಮಾನವೀಯತೆಯನ್ನು ಅರಿಯಬೇಕು. ಯಾಕೆಂದರೆ ಮಾನವೀಯತೆ ಇರುವ ವ್ಯಕ್ತಿಗೆ ಕಠಿಣ ಶಿಕ್ಷೆ ಬೇಕಾಗಿಲ್ಲ. ಆದರೆ ಮಹಿಳಾ ಶೋಷಣೆಯನ್ನು ತನ್ನ ಕಾಲ ಚಪ್ಪಲಿಯನ್ನಾಗಿ ಮಾಡಿಕೊಂಡ ಈ ಸಮಾಜಕ್ಕೆ ಮಾನವೀಯತೆಯೇ ಸತ್ತುಹೋಗಿರುವಾಗ ಇಂತಹ ಜನ ಕಾನೂನನ್ನು ಹೇಗೆ ಅರಿತಾರು?
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)