varthabharthi


ಅಂತಾರಾಷ್ಟ್ರೀಯ

ಅಮೆರಿಕ: ಮೇಲ್ಛಾವಣಿಯಿಂದ ನುಗ್ಗಿದ ಗುಂಡು ತಗುಲಿ ಕೇರಳದ ಯುವತಿ ಮೃತ್ಯು

ವಾರ್ತಾ ಭಾರತಿ : 30 Nov, 2021

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಅಮೆರಿಕದ ಅಲಬಾಮಾ ರಾಜಧಾನಿ ಮಾಂಟ್‌ಗೊಮೆರಿಯಲ್ಲಿ ಮೇಲ್ಛಾವಣಿಯಿಂದ ತೂರಿಕೊಂಡು ಬಂದ ಗುಂಡಿಗೆ 19 ವರ್ಷದ ಕೇರಳದ ಯುವತಿಯೊಬ್ಬರು ಬಲಿಯಾಗಿದ್ದಾರೆ.

ಮೃತಪಟ್ಟ ಯುವತಿಯನ್ನು ಮರಿಯಮ್ ಸುಸಾನ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಯುವತಿಯು ತನ್ನ ಮನೆಯಲ್ಲಿ ಮಲಗಿದ್ದಾಗ ಮೇಲಿನ ಮಹಡಿಯಿಂದ ಮೇಲ್ಛಾಣಿ ಸೀಳಿಕೊಂಡು ಬಂದ ಗುಂಡು ಆಕೆಯನ್ನು ಬಲಿ ಪಡೆದಿದೆ ಎಂದು ವರದಿಯಾಗಿದೆ.

ಮಾಂಟ್ಗೊಮೆರಿ ಪೊಲೀಸ್ ಇಲಾಖೆ ತನಿಖೆಯನ್ನು ಪ್ರಾರಂಭಿಸಿದೆ.

ಮರಿಯಮ್ ಸೂಸನ್ ಮ್ಯಾಥ್ಯೂ ಅವರ ನಿವಾಸದ  ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದವರ ಬಂದೂಕಿನಿಂದ ತೂರಿಕೊಂಡು ಬಂದ ಗುಂಡು ತಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸೌತ್-ವೆಸ್ಟ್ ಅಮೆರಿಕದ ಮಲಂಕರ ಆರ್ಥೊಡಾಕ್ಸ್ ಚರ್ಚ್ ಡೈಯೊಸಿಸ್ ನ ಫಾದರ್ ಜಾನ್ಸನ್ ಪಪ್ಪಚನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಿಯಮ್ ಸುಸಾನ್ ಮ್ಯಾಥ್ಯೂ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿರಣಂ ಮೂಲದ ಬೋಬೆನ್ ಮ್ಯಾಥ್ಯೂ ಅವರ ಪುತ್ರಿ. ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)