varthabharthi


ಕ್ರೀಡೆ

ಐಸಿಸಿ ಮಹಿಳೆಯರ ಏಕದಿನ ರ್‍ಯಾಂಕಿಂಗ್ ಸ್ಥಾನ ಕಾಯ್ದುಕೊಂಡ ಮಿಥಾಲಿ ರಾಜ್, ಸ್ಮೃತಿ

ವಾರ್ತಾ ಭಾರತಿ : 1 Dec, 2021

 ಮಿಥಾಲಿ ರಾಜ್ (photo:PTI)

ದುಬೈ, ನ.30: ಭಾರತದ ಮಹಿಳಾ ಬ್ಯಾಟರ್‌ಗಳಾದ ಮಿಥಾಲಿ ರಾಜ್ ಹಾಗೂ ಸ್ಮತಿ ಮಂಧಾನ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಮಹಿಳೆಯರ ಏಕದಿನ ರ್‍ಯಾಂಕಿಂಗ್ ನಲ್ಲಿ ಕ್ರಮವಾಗಿ 3ನೇ ಹಾಗೂ 6ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆಲ್‌ರೌಂಡರ್ ದೀಪ್ತಿ ಶರ್ಮಾ ಕೂಡ ಐದನೇ ಸ್ಥಾನ ಉಳಿಸಿಕೊಂಡಿದ್ದಾರೆ. ಬ್ಯಾಟಿಂಗ್ ರ್‍ಯಾಂಕಿಂಗ್ ನಲ್ಲಿ ಮಿಥಾಲಿ 738 ಪಾಯಿಂಟ್ಸ್, ಸ್ಮತಿ 710 ಪಾಯಿಂಟ್ಸ್ ಗಳಿಸಿದರೆ, 761 ಅಂಕ ಗಳಿಸಿರುವ ದ.ಆಫ್ರಿಕಾದ ಲೈಝೆಲ್ ಲೀ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್‌ಇಂಡೀಸ್ ಆಟಗಾರ್ತಿಯರಾದ ಸ್ಟಫಾನಿ ಟೇಲರ್ ಹಾಗೂ ಹ್ಯಾಲಿ ಮ್ಯಾಥ್ಯೂಸ್ ಏಕದಿನ ಕ್ರಿಕೆಟ್ ಬ್ಯಾಟಿಂಗ್ ಹಾಗೂ ಅಲ್‌ರೌಂಡರ್ ರ್‍ಯಾಂಕಿಂಗ್ ನಲ್ಲಿ ಭಡ್ತಿ ಪಡೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)