varthabharthi


ರಾಷ್ಟ್ರೀಯ

ಎಲ್ ಪಿಜಿ ಗ್ರಾಹಕರಿಗೆ ದೊಡ್ಡ ಹೊಡೆತ: ವಾಣಿಜ್ಯ ಸಿಲಿಂಡರ್ ಬೆಲೆ 103 ರೂ. ಏರಿಕೆ

ವಾರ್ತಾ ಭಾರತಿ : 1 Dec, 2021

ಹೊಸದಿಲ್ಲಿ: ಎಲ್ ಪಿಜಿ ಗ್ರಾಹಕರಿಗೆ ದೊಡ್ಡ ಹೊಡೆತ ನೀಡಲಾಗಿದ್ದು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಎಲ್‌ಪಿಜಿ  ಬೆಲೆಯನ್ನು ಬುಧವಾರ 103.50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇಂದಿನಿಂದಲೇ ಬೆಲೆ ಏರಿಕೆ ಜಾರಿಗೆ ಬರಲಿದೆ.

ದಿಲ್ಲಿಯಲ್ಲಿ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ ಇಂದಿನಿಂದ 2,104 ರೂ ಆಗಲಿದೆ, ಅದು ಮೊದಲು 2000.50 ರೂ.  ಆಗಿತ್ತು. ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 101 ರೂಪಾಯಿ ಏರಿಕೆಯಾಗಿ 2,174.5 ರೂಪಾಯಿಗೆ ತಲುಪಿದೆ. ಮೊದಲು ಇದರ ಬೆಲೆ 2073.5 ರೂ. ಇತ್ತು.

ಮುಂಬೈನಲ್ಲಿ ವಾಣಿಜ್ಯ ಗ್ಯಾಸ್ ಬೆಲೆ 2,051 ರೂ.ಗೆ ಏರಿಕೆಯಾಗಿದೆ. ಮೊದಲು ಬೆಲೆ 1,950 ರೂ. ಇತ್ತು. ಇಲ್ಲಿ 101 ರೂಪಾಯಿ ಏರಿಕೆಯಾಗಿದೆ.

ಅದೇ ಸಮಯದಲ್ಲಿ ಚೆನ್ನೈನಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ರೂ.ಗೆ ಏರಿದೆ. ಈ ಹಿಂದಿನ ಬೆಲೆ 2,133 ರೂ.

 ಪೆಟ್ರೋಲಿಯಂ ಕಂಪನಿಗಳು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಯಾವುದೇ ಬೆಲೆ ಹೆಚ್ಚಳ ಮಾಡಿಲ್ಲ. ದಿಲ್ಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ದೇಶೀಯ ಸಿಲಿಂಡರ್‌ನ ಬೆಲೆ ಪ್ರತಿ ಬಾಟಲಿಗೆ 899.50 ರೂ ಆಗಿದ್ದರೆ, 5 ಕೆಜಿ ಗೃಹಬಳಕೆಯ ಸಿಲಿಂಡರ್‌ನ ಹೊಸ ದರ 502 ರೂ. ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)