varthabharthi


ಕರ್ನಾಟಕ

ಮೈಸೂರು: ವಸತಿಗೃಹದಲ್ಲಿ ಯುವಕ -ಯುವತಿ ಆತ್ಮಹತ್ಯೆ

ವಾರ್ತಾ ಭಾರತಿ : 1 Dec, 2021

ಸಾಂದರ್ಭಿಕ ಚಿತ್ರ

ಮೈಸೂರು,ಡಿ.1: ವಸತಿಗೃಹವೊಂದಕ್ಕೆ ತಂಗಲು ಬಂದ ಯುವಕ ಹಾಗೂ ಯುವತಿ ವಸತಿಗೃಹದಲ್ಲಿಯೇ ನೇಣಿಗೆ ಶರಣಾದ ಘಟನೆ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.

ನಿನ್ನೆ ಸಂಜೆ ವಸತಿ ಗೃಹಕ್ಕೆ ತಂಗಲು ಬಂದವರು ರಾತ್ರಿಯೂ ಹೊರಗೆ ಬಂದಿರಲಿಲ್ಲ, ಇಂದು ಬೆಳಿಗ್ಗೆ ಹೊರಗೆ ಬಾರದಿರುವುದನ್ನು ಗಮನಿಸಿದ ಗ್ಯಾಲಕ್ಸಿ ಕಂಫರ್ಟ್ ವಸತಿಗೃಹದ ಮಾಲಕ ರೂಮ್ ಬಳಿ ಹೋಗಿ ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಲಷ್ಕರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತರು ಗುಂಡ್ಲುಪೇಟೆಯವರು ಎನ್ನಲಾಗುತ್ತಿದೆ. ಶವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಗೆ ನೀಡಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)