varthabharthi


ಕ್ರೀಡೆ

8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಡಿ.22ರಿಂದ ಬೆಂಗಳೂರಿನಲ್ಲಿ ಆರಂಭ

ವಾರ್ತಾ ಭಾರತಿ : 1 Dec, 2021

ಸಾಂದರ್ಭಿಕ ಚಿತ್ರ:PTI

ಬೆಂಗಳೂರು, ಡಿ.1: ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಡಿಸೆಂಬರ್ 22ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಪಂದ್ಯಕ್ಕೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ ಎಂದು ಆಯೋಜಕರು ಬುಧವಾರ ತಿಳಿಸಿದ್ದಾರೆ.

ಟೂರ್ನಿ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್ ಮೊದಲ ನಾಲ್ಕು ದಿನ 3 ಪಂದ್ಯಗಳನ್ನು ನಿಗದಿಪಡಿಸಿದ್ದಾರೆ.

ಪಿಕೆಎಲ್-8 ಯು ಮುಂಬಾ ಹಾಗೂ ಬೆಂಗಳೂರು ಬುಲ್ಸ್ ನಡುವಿನ ಮುಖಾಮುಖಿಯೊಂದಿಗೆ ಆರಂಭವಾಗಲಿದೆ. ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವು ತಮಿಳ್ ತಲೈವಾಸ್ ತಂಡವನ್ನು ಎದುರಿಸಲಿದೆ. ಮೊದಲ ದಿನದ ಕೊನೆಯ ಪಂದ್ಯದಲ್ಲಿ ಯುಪಿ ಯೋಧಾ ತಂಡವು ಹಾಲಿ ಚಾಂಪಿಯನ್ ಬಂಗಾಳ ವಾರಿಯರ್ಸ್‌ನ್ನು ಎದುರಿಸಲಿದೆ.

ಕೋವಿಡ್ ಸಮಯದಲ್ಲಿ ಆಟಗಾರರ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟು ಕೊಂಡು ಸಂಘಟಕರು ಶೆರಟಾನ್ ಗ್ರಾಂಡ್ ಬೆಂಗಳೂರು ವೈಟ್ ಫೀಲ್ಡ್ ಹೋಟೆಲ್ ಹಾಗೂ ಕನ್ವೆನ್ಶನ್ ಸೆಂಟರ್‌ನಲ್ಲಿರುವ ಸಂಪೂರ್ಣ ಸ್ಥಳವನ್ನು ಸಮಗ್ರ ಹಾಗೂ ಸುರಕ್ಷಿತ ಜೈವಿಕ ಬಬಲ್ ಆಗಿ ಪರಿವರ್ತಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)